ವಿರಾಜಪೇಟೆಯಲ್ಲಿ ಈಚೆಗೆ ನಡೆದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವಾರ್ಷಿಕ ಕ್ರೀಡಾಕೂಟ ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.
ಯುವ ಸಮೂಹವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಪ್ರತಿಯೊಬ್ಬರು ದಿನದ ಒಂದಷ್ಟು ಸಮಯವನ್ನು ವ್ಯಾಯಾಮ ದೈಹಿಕ ಕಸರತ್ತಿಗೆ ಮೀಸಲಿಡಬೇಕು.