ಸೋಮವಾರಪೇಟೆ: ಸೋಮನಾಥ ಜ್ಯೋತಿರ್ಲಿಂಗ ಏಪ್ರಿಲ್ 21ರಂದು ಪಟ್ಟಣಕ್ಕೆ ಆಗಮಿಸಲಿದೆ. ಕ್ರಿಸ್ತಶಕ 1026ರಲ್ಲಿ ಗುಜರಾತ್ ನ ಸೋಮನಾಥ ದೇವಸ್ಥಾನದ ಮೇಲೆ ಮಹಮ್ಮದ್ ಘಜ್ನಿ ದಾಳಿ ಮಾಡಿದ್ದ ಸಮಯ ಶಿವಲಿಂಗಕ್ಕೆ ತೀವ್ರ ಹಾನಿಯಾಗಿತ್ತು. ಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಬ್ರಾಹ್ಮಣರು ತಮ್ಮ ಬಳಿ ಸಂರಕ್ಷಿಸಿ, ಆ ಚೂರುಗಳಿಗೆ ಶಿವಲಿಂಗದ ರೂಪವನ್ನು ಕೊಟ್ಟು ನೂರಾರು ವರ್ಷಗಳ ಕಾಲ ಸಂರಕ್ಷಿಸಿಕೊಂಡು ಬಂದಿದ್ದಾರೆ.

ಇದೀಗ ಶ್ರೀ ರವಿಶಂಕರ್ ಗುರೂಜಿಯವರ ಆಶ್ರಮದ ವತಿಯಿಂದ ಈ ಜ್ಯೋತಿರ್ಲಿಂಗವನ್ನು ಜನರಿಗೆ ದರ್ಶನ ಮಾಡಿಸುವ ಉದ್ದೇಶದಿಂದ ದೇಶದಾದ್ಯಂತ ಯಾತ್ರೆಯ ಮೂಲಕ ಜ್ಯೋತಿರ್ಲಿಂಗ ದರ್ಶನವನ್ನು ಜನರಿಗೆ ಮಾಡಿಸುತ್ತಿದ್ದಾರೆ. ಅಂದು ಸಂಜೆ 5 ಗಂಟೆಯಿಂದ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಸಂಸ್ಥೆಯ ವತಿಯಿಂದ ಸತ್ಸಂಗ, ಪೂಜೆ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1057768684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.