ಸೋಮವಾರಪೇಟೆ: ಸಮೀಪದ ಐಗೂರಿನ ಮುತ್ತಪ್ಪ ದೇವರು ಹಾಗೂ ಪರಿವಾರ ದೈವಗಳ ಕೋಲ ಮತ್ತು ವೆಳ್ಳಾಟಂ ಸೇವೆಗಳು ಈಚೆಗೆ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಭಾನುವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ ಗುಳಿಗಪ್ಪ ದೇವಾಲಯದಿಂದ ಹೊರಟ ಭವ್ಯ ಮೆರವಣಿಗೆಯು ಚಂಡೆಮೇಳದೊಂದಿಗೆ ಐಗೂರಿನ ಮುಖ್ಯ ಬೀದಿಗಳಲ್ಲಿ ಸಾಗಿತು. ರಾತ್ರಿ ಮುತ್ತಪ್ಪನ್, ತಿರುವಪ್ಪನ್, ಕುಟ್ಟಿಚಾತನ್ ಹಾಗೂ ಗುಳಿಗನ್ ವೆಳ್ಳಾಟಂ ಸೇವೆಗಳು ನಡೆದವು. ಉತ್ಸವದ ಎರಡನೇ ದಿನ ಸೋಮವಾರ ಬೆಳಿಗ್ಗೆ ವಿವಿಧ ದೈವಗಳ ಕೋಲ ಸೇವೆಗಳು ಆರಂಭವಾದವು. 3 ಗಂಟೆಗೆ ಗುಳಿಗನ ಕೋಲ, ಮುತ್ತಪ್ಪ ದೇವರ ಕೋಲ, ತಿರುವಪ್ಪನ್ ಕೋಲ ಹಾಗೂ ಕುಟ್ಟಿಚಾತನ್ ಕೋಲಗಳು ಸಾಂಗವಾಗಿ ನೆರವೇರಿದವು. ನಂತರ ನಡೆದ ಪೋದಿ ಕೋಲ, ಗುರು ಶ್ರೀತರ್ಪಣ ಕಾರ್ಯಕ್ರಮದೊಂದಿಗೆ ಪ್ರಸಕ್ತ ಸಾಲಿನ ಉತ್ಸವಕ್ಕೆ ತೆರೆ ಬಿತ್ತು.

ಉತ್ಸವದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿಜಯ್, ಉತ್ಸವ ಸಮಿತಿ ಅಧ್ಯಕ್ಷ ಮಣಿಕಂಠ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1188154820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.