ಸೋಮವಾರಪೇಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದಲ್ಲಿ ಬುಧವಾರ ಅರಣ್ಯ ಜಮೀನು ತೆರವು ಕಾರ್ಯಾಚರಣೆ ಸಂದರ್ಭ ಅರಣ್ಯಾಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಗ್ರಾಮದ 2.50 ಎಕರೆ ಜಾಗವನ್ನು ಜೆಸಿಬಿಯಿಂದ ತೆರೆವುಗೊಳಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪೊಲೀಸ್ ರಕ್ಷಣೆಯಲ್ಲಿ ತೆರಳಿದ್ದರು. ಈ ಸಂದರ್ಭ ರೈತ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ.ಸುರೇಶ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ನೇತೃತ್ವದಲ್ಲಿ ರೈತರು ಜಾಗ ತೆರವುಗೊಳಿಸಲು ಅಡ್ಡಿಪಡಿಸಿದರು.

‘ರೈತರ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಮಾಡಬಾರದು. ಕಳೆದ ಒಂದು ವರ್ಷದ ಹಿಂದಿನಿಂದಲೂ ರೈತ ಹೇಮಂತ್ ಅವರಿಗೆ ಅರಣ್ಯ ಇಲಾಖೆಯಿಂದ ಕಿರುಕುಳವಾಗುತ್ತಿದೆ. ಸ್ಥಳಕ್ಕೆ ಎ.ಸಿ.ಎಫ್. ಮತ್ತು ಡಿ.ಎಫ್.ಒ. ಬಂದು ಸಮಾಜಾಯಿಷಿ ನೀಡಬೇಕು’ ಎಂದು ರೈತರು ಒತ್ತಾಯಿಸಿದರು.

ಜಿ.ಎಂ.ಹೂವಯ್ಯ ಮಾತನಾಡಿ, ‘ಸಿ ಅಂಡ್ ಡಿ ಭೂಮಿ ಸಮಸ್ಯೆ ಬಗಹರಿಸಲು ಸರ್ಕಾರ ವಿಶೇಷ ಸಮಿತಿ ರಚಿಸಿದೆ. ಅನುಪಾಲನ ವರದಿ ಸರ್ಕಾರಕ್ಕೆ ಸೇರುವ ಮೊದಲೇ ಅರಣ್ಯ ಇಲಾಖೆ ಸಣ್ಣಪುಟ್ಟ ರೈತರ ಜಮೀನನ್ನು ಕಸಿದುಕೊಳ್ಳುತ್ತಿವುದನ್ನು ರೈತ ಸಂಘ ವಿರೋಧಿಸುತ್ತದೆ’ ಎಂದು ಹೇಳಿದರು.

ಅರಣ್ಯ ಇಲಾಖೆಯ ಸಿಬ್ಬಂದಿ ವಾಪಸ್ ತೆರಳಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲಕ್ಷ್ಮಣ, ಬಿ.ಪಿ.ಮೊಗಪ್ಪ, ಎಸ್.ಎಂ.ಡಿಸಿಲ್ವಾ, ಮಚ್ಚಂಡ ಅಶೋಕ್. ವಿ.ಎಂ.ವಿಜಯ, ಎಚ್.ಈ.ರಮೇಶ್, ಕುಶಾಲಪ್ಪ, ದೇಶ್ ರಾಜ್ ಪಾಲ್ಗೊಂಡಿದ್ದರು. ಅರಣ್ಯ ಇಲಾಖೆ ಡಿ.ಆರ್ .ಎಫ್. ಗಳಾದ ಪ್ರಶಾಂತ್, ಲೋಹಿತ್, ಕಿರಣ್,ರೇಣುಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

ಹೋರಾಟ ಎಚ್ಚರಿಕೆ:  ಕೆ.ಬಿ. ಸುರೇಶ್ ಮಾತನಾಡಿ ‘ರೈತರ ಮೇಲಿನ ಕಿರುಕುಳವನ್ನು ಅರಣ್ಯ ಇಲಾಖೆ ನಿಲ್ಲಿಸಬೇಕು. ಅರಣ್ಯ ಇಲಾಖೆಯವರು ಕಾಫಿ ತೋಟಕ್ಕೆ ನುಗ್ಗಿ ಜೆಸಿಬಿಯ ಮುಖಾಂತರ ತೋಟವನ್ನು ನಾಶಪಡಿಸಲು ಹೊರಟಿದ್ದಾರೆ. ಆನೆ–ಮಾನವ ಸಂಘರ್ಷವನ್ನು ತಡೆಯಲು ವಿಫಲವಾಗಿರುವ ಇಲಾಖೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ’ ಎಂದರು. ದಬ್ಬಾಳಿಕೆ ಹೀಗೆ ಮುಂದುವರಿದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.