ಸೋಮವಾರಪೇಟೆ: ‘ಭಗವಂತನನ್ನು ಗುಡಿಗಳಿಗೆ ಸೀಮಿತ ಮಾಡಿಕೊಳ್ಳದೆ, ನಮ್ಮ ಆತ್ಮದಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಲ್ಲಿ ಮಾತ್ರ ನಾವು ನಿರ್ಮಾಣ ಮಾಡುವ ದೇವಾಲಯಕ್ಕೆ ಅರ್ಥ ಬರುತ್ತದೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ಕಾಲ ಭೈರವೇಶ್ವರ ಮತ್ತು ವನದುರ್ಗಾ ದೇವಿಯ ಪುನರ್ ಪ್ರತಿಷ್ಠಾಪನಾ ಮತ್ತು ಅಷ್ಠಬಂಧ ಬ್ರಹ್ಮಕಲೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರು ಪ್ರತಿಯೊಬ್ಬರ ಹೃದಯ, ಮನೆಮನೆಗಳಲ್ಲಿ, ನಮ್ಮ ನಡೆನುಡಿಗಳಲ್ಲಿ ನೆಲೆಸಿದ್ದು, ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅಂತರಾತ್ಮದಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಿಕೊಂಡು, ಸತ್ಯ, ಧರ್ಮ, ದಯೆ ಮತ್ತು ಪ್ರೀತಿ ಎಂಬ ಮೌಲ್ಯಗಳೊಂದಿಗೆ ಬದುಕಿದಾಗ ನಮ್ಮ ಜೀವನವೇ ದೇವಾಲಯವಾಗುತ್ತದೆ’ ಎಂದು ಹೇಳಿದರು.

‘ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಗ್ರಾಮದಲ್ಲಿ ಭಕ್ತಿ, ಶಾಂತಿ ಮತ್ತು ಏಕತೆಯನ್ನು ಹೆಚ್ಚಿಸುತ್ತವೆ. ದೇವಾಲಯಗಳು ಪೂಜೆಗೆ ಮಾತ್ರವಲ್ಲ, ಸಮಾಜದಲ್ಲಿ ಸದುದ್ದೇಶ, ಸತ್ಪ್ರವೃತ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ ಕೇಂದ್ರಗಳಾಗಬೇಕು. ಭಗವಂತನನ್ನು ಗುಡಿಯಲ್ಲಿ ಮಾತ್ರ ನೋಡಿದರೆ ಸಾಲದು ಮನೆಯೂ ದೇವಾಲಯವಾಗಬೇಕು. ತಂದೆ– ತಾಯಿಗಳನ್ನು ಗೌರವದಿಂದ ನೋಡಿಕೊಳ್ಳುವ ಮನೆಯ ಸಮೃದ್ಧಿಗೆ ದೇವರು ಸಹಾಯ ಮಾಡುತ್ತಾನೆ’ ಎಂದು ಹೇಳಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಹಿಂದಿನಿಂದಲೂ ನಮ್ಮ ರಾಷ್ಟ್ರ ಧರ್ಮ ಮತ್ತು ಸಂಸ್ಕೃತಿಯೊಂದಿಗೆ ಒಟ್ಟಿಗೆ ಬೆಳೆದುಕೊಂಡು ಬಂದಿದೆ. ಸುಸಂಸ್ಕೃತ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಹಿರಿಯರ ಕೊಡುಗೆಯೂ ಇದೆ. ಕೊಡಗಿನಲ್ಲೂ ಧರ್ಮ, ಸಂಸ್ಕೃತಿ, ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ.ಎ. ಜೀವಿಜಯ, ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಎ.ಎನ್. ಪದ್ಮನಾಭ, ಕಾಲಬೈರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮತ್ತು ಪದಾಧಿಕಾರಿಗಳು ಇದ್ದರು.

ಮಂಗಳವಾರ ಸಂಜೆ ಗಣಪತಿ, ವಾಸ್ತು ಹೋಮ ವೇದಬ್ರಹ್ಮ ರಘುಪತಿಭಟ್ ತಂತ್ರಿಗಳ ಪುರೋಹಿತ್ಯದಲ್ಲಿ ನೆರವೇರಿತು. ಬುಧವಾರ ಕಾಲ ಭೈರವೇಶ್ವರ ಹಾಗೂ ವನದುರ್ಗಾದೇವಿಯ ಪ್ರತಿಷ್ಠಾಪನೆ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-999276607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.