ಸೋಮವಾರಪೇಟೆ: ಸಮೀಪದ ಹಾನಗಲ್ಲು ಶೆಟ್ಟಳ್ಳಿಯಲ್ಲಿ ವಾರ್ಷಿಕ ಸುಗ್ಗಿ ಉತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಏಪ್ರಿಲ್ 16ರಂದು ಬೀರೇದೇವರಿಗೆ ವೀಳ್ಯ ಚೆಲ್ಲುವ ಸಂಪ್ರದಾಯದ ಮೂಲಕ ಹಾನಗಲ್ಲು ಶೆಟ್ಟಳ್ಳಿಯಲ್ಲಿ ಸುಗ್ಗಿ ಉತ್ಸವ ಪ್ರಾರಂಭಗೊಂಡಿದ್ದು, ಗ್ರಾಮಸ್ಥರು ಕಟ್ಟುನಿಟ್ಟಿನ ಆಚರಣೆಯಲ್ಲಿ ತೊಡಗಿದ್ದರು. ಗ್ರಾಮದ ಮಧ್ಯಭಾಗದಲ್ಲಿರುವ ಸಬ್ಬಮ್ಮ ದೇವಾಲಯದಲ್ಲಿ ವಾರ್ಷಿಕ ಪೂಜೆಗಳು ನಡೆದವು. ಉತ್ಸವದಲ್ಲಿ ಹಾನಗಲ್ಲು ಶೆಟ್ಟಳ್ಳಿ ಗ್ರಾಮದೊಂದಿಗೆ ಸುತ್ತಮುತ್ತಲ ಊರಿನಿಂದ ಸಾರ್ವಜನಿಕರು, ಬಂಧುಗಳು ಆಗಮಿಸಿ ಗ್ರಾಮ ದೇವಿಗೆ ಪೂಜೆ ಸಲ್ಲಿಸಿದರು.

ಗ್ರಾಮದ ಸುಭಿಕ್ಷೆಗಾಗಿ ಗ್ರಾಮ ದೇವತೆ ಸಬ್ಬಮ್ಮ ದೇವಿಯನ್ನು ಸಾಮೂಹಿಕವಾಗಿ ಪ್ರಾರ್ಥಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇಂದಿಗೂ ಅದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಅಧ್ಯಕ್ಷ ಎಲ್.ವಿ. ಉಲ್ಲಾಸ್ ತಿಳಿಸಿದರು.

ಏ.19 ಊಲು ಏರಿಸುವುದು, 24ರಂದು ಸಬ್ಬಮ್ಮ ದೇವರಿಗೆ ಮಡೆ ಮಾಡುವ ಸಂಪ್ರದಾಯಗಳು ನಡೆದಿದ್ದು, ಸೋಮವಾರ ಹಗಲು ಸುಗ್ಗಿ ಶ್ರದ್ಧಾಭಕ್ತಿಯೊಂದಿಗೆ ವಿವಿಧ ಪೂಜಾ ಕಾರ್ಯಗಳ ಮೂಲಕ ನೆರವೇರಿತು. ಮಂಗಳವಾರ ಮಾರಿ ಕಳುಹಿಸುವ ಸಾಂಪ್ರದಾಯಿಕ ಪೂಜೆಯ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ತೆರೆಬೀಳಲಿದೆ ಎಂದು ಸಮಿತಿಯ ಉಪಾಧ್ಯಕ್ಷ ಎಂ.ಟಿ. ಉಮೇಶ್ ತಿಳಿಸಿದರು.

ಸುಗ್ಗಿ ಅಂಗವಾಗಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಉಯಿಲು ತೂಗುವುದು, ದೇವರ ಮೂರ್ತಿಯ ಮೆರವಣಿಗೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ಸುಗ್ಗಿ ಕುಣಿತ, ತೆಂಗಿನ ಕಾಯಿ ಕೀಳುವುದು ಸೇರಿದಂತೆ ಇತರ ಸಾಂಪ್ರದಾಯಿಕ ಆಚರಣೆಗಳು ನೆರವೇರಿದವು.

ಅನಾದಿ ಕಾಲದಿಂದಲೂ ಗ್ರಾಮದಲ್ಲಿ ಸುಗ್ಗಿ ಹಬ್ಬ ನಡೆಸಿಕೊಂಡು ಬರಲಾಗುತ್ತಿದ್ದು, ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿಯೂ ಸುಗ್ಗಿ ಉತ್ಸವ ಮನ್ನಣೆ ಪಡೆದಿದೆ. ಯುವ ಜನಾಂಗದಲ್ಲೂ ಸುಗ್ಗಿಯ ಮಹತ್ವ ತಿಳಿಸುವ ಕಾರ್ಯಗಳು ನಡೆಯುತ್ತಿವೆ ಎಂದು ಗ್ರಾಮ ಸಮಿತಿ ಗೌರವಾಧ್ಯಕ್ಷರಾದ ಡಿ.ಟಿ. ಆನಂದ್, ಎಲ್.ಎಂ. ಪ್ರಸನ್ನ ತಿಳಿಸಿದರು.

ದೇವರ ಒಡೆಕಾರರಾಗಿ ಜೋಯಪ್ಪ, ಎಲ್.ಕೆ. ಚಂದ್ರಶೇಖರ್, ಎ.ಜೆ. ರಘು, ಪ್ರಸನ್ನ ಎಂ.ಕೆ, ಡಿ.ಈ.ಪವನ್ ಸೇವೆ ಸಲ್ಲಿಸಿದರು.

ಪೂಜಾಕಾರ್ಯದಲ್ಲಿ ಎ.ಎಂ. ಡಿಂಪಲ್, ಡಿ.ವಿ. ನಿಖಿಲ್, ರಾಕೇಶ್ ಪಟೇಲ್ ಭಾಗಿಯಾಗಿದ್ದರು. ಸಮಿತಿಯ ಖಜಾಂಚಿ ಶೋಭರಾಜ್, ಪದಾಧಿಕಾರಿಗಳಾದ ಸಚಿನ್, ಅಶ್ವತ್, ಚಲನ್ ಸುಗ್ಗಿ ಕಾರ್ಯದಲ್ಲಿ ಸಹಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-1312194323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.