ಸೋಮವಾರಪೇಟೆ: ತಾಲ್ಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಕ್ಕಳಗುಡಿ ಬೆಟ್ಟದಲ್ಲಿ ಪ್ರವಾಸಿಗರು ಪ್ರಕೃತಿಯ ಸೌಂದರ್ಯ ರಾಶಿಯಲ್ಲಿ ಮಿಂದೇಳುತ್ತಿದ್ದಾರೆ.

ಇಡೀ ಪ್ರಕೃತಿಯ ರಾಶಿಯನ್ನೇ ಹೊದ್ದು ಮಲಗಿರುವಂತೆ ಭಾಸವಾಗುವ ಮಕ್ಕಳಗುಡಿ ಬೆಟ್ಟದ ಸುತ್ತಲಿನ ಜಾಗ ಈ ಹಿಂದೆ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ರಾರಾಜಿಸುತ್ತಿತ್ತು. ಇಲ್ಲಿ ಅವರನ್ನು ನಿಯಂತ್ರಿಸಲು ಯಾವುದೇ ಯೋಜನೆಗಳಿಲ್ಲದೆ, ಪ್ರವಾಸಿಗರು ಬಂದು ಹೋಗಲು ಕಷ್ಟವಾಗುತ್ತಿತ್ತು. ಆದರೀಗ, ಇದರ ವ್ಯಾಪ್ತಿಯನ್ನು ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಇಡಲಾಗಿದೆ. ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಪಂಚಾಯಿತಿ ಹಾಗೂ ದಾನಿಗಳು ನೆರವಿನಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವೆಡೆ ದಾನಿಗಳ ನೆರವಿನಿಂದ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳೇ ನಿರ್ಮಿಸಿದ್ದ ಗುಡಿಗೆ ಚಾವಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಸ್ವಚ್ಛ ಪರಿಸರಕ್ಕೆ ನಾಂದಿಯಾಗಿದೆ.

ಹಿನ್ನೆಲೆ; ನೂರಾರು ವರ್ಷಗಳ ಹಿಂದೆ ದನಗಾಹಿ ಮಕ್ಕಳು ಈ ಬೆಟ್ಟದ ತುದಿಗೆ ಜಾನುವಾರುಗಳನ್ನು ಕರೆತಂದು ಮೇಯಲು ಬಿಡುತ್ತಿದ್ದರು. ಈ ವೇಳೆ ಮಕ್ಕಳೇ ಸೇರಿಕೊಂಡು ಸಣ್ಣಪುಟ್ಟ ಸಾವಿರಾರು ಕಲ್ಲುಗಳನ್ನು ಜೋಡಿಸಿ ಪುಟ್ಟ ಗುಡಿಯೊಂದನ್ನು ನಿರ್ಮಿಸಿ, ಅದರೊಳಗೆ ಕಲ್ಲಿನ ವಿಗ್ರಹ ಇರಿಸಿ ಪೂಜಿಸುತ್ತಿದ್ದರು ಎಂಬ ಪ್ರತೀತಿ ಇದೆ. ಈಗಲೂ ಈ ಕಥೆಗೆ ಪೂರಕವೆಂಬಂತೆ ಬೆಟ್ಟದ ಮೇಲೆ ಸಾವಿರಾರು ಕಲ್ಲುಗಳಿಂದ ಕೂಡಿರುವ ಗುಡಿ ಇದೆ. ಈ ಗುಡಿಯಲ್ಲಿರುವ ವಿಗ್ರಹಕ್ಕೆ ಇಂದಿಗೂ ಷಷ್ಠಿ ದಿನದಂದು ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ.

ಪ್ರಕೃತಿ ಸಿರಿಯ ವಿಹಂಗಮ ನೋಟ: ಮಕ್ಕಳಗುಡಿ ಬೆಟ್ಟದ ತುದಿಗೆ ತಲುಪಿದರೆ ಪ್ರಕೃತಿ ಸೌಂದರ್ಯದ ವಿಸ್ಮಯ ಲೋಕ ತೆರೆದುಕೊಳ್ಳುತ್ತದೆ. ಪ್ರವಾಸಿಗರಿಗೆ ಪ್ರಕೃತಿ ವೀಕ್ಷಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಟ್ಟದ ಮೇಲೆ ಕಟ್ಟೆಯೊಂದನ್ನು ನಿರ್ಮಿಸಲಾಗಿದೆ. ಇಲ್ಲಿ ಮಳೆಗಾಲದಲ್ಲಿ ಆಗುಂಬೆಯ ಅನುಭವ ಆಗುತ್ತದೆ. ಸುತ್ತಲೂ ಕಣ್ಣು ಹಾಯಿಸಿದಾಗ ಸೋಮವಾರಪೇಟೆ ನಗರ, ಬಜೆಗುಂಡಿ ಗ್ರಾಮ, ಮಾದಾಪುರದ ಐತಿಹಾಸಿಕ ಕೋಟೆ ಬೆಟ್ಟ, ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶ, ಐಗೂರು ಪ್ರೌಢಶಾಲೆ, ಟಾಟಾ ಕಾಫಿ ಸಂಸ್ಥೆಗೆ ಸೇರಿದ ಹಚ್ಚಹಸುರಿನ ಕಾಫಿ ತೋಟಗಳು ಕಾಣಸಿಗುತ್ತದೆ. ಇದಕ್ಕೆ ಇಂಬುಗೊಡುವಂತೆ ಬೆಟ್ಟದ ಮೇಲೊಂದು ಪುಟ್ಟದಾದ ಕೆರೆ ಇದ್ದು, ಬೇಸಿಗೆಯಲ್ಲೂ ನೀರು ಇರುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-528523257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.