ಸೋಮವಾರಪೇಟೆ: ಪ್ರಸಕ್ತ ಸಾಲಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅದ್ದೂರಿ ರಾಮನವಮಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಆಂಜನೇಯ ದೇವಾಲಯ ಮತ್ತು ಕುರುಹಿನಶೆಟ್ಟಿ ಸಮಾಜದ ರಾಮ ಮಂದಿರದಲ್ಲಿ ಮಾರ್ಚ್ 19ರಿಂದ ವಿಶೇಷ ಪೂಜೆಗಳು ಪ್ರಾರಂಭಗೊಂಡಿದೆ.

ಆಂಜನೇಯ ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಪಟ್ಟಣದ ಕೆಲವು ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್ ರಾರಾಜಿಸುತ್ತಿವೆ. ಮಾರ್ಚ್ 27ರಂದು ಸಂಜೆ ಸ್ತಬ್ಧಚಿತ್ರಗಳ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಗ್ರಾಮಗಳಿಂದ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತ ವಾಹನಗಳು ಆಂಜನೇಯ ದೇವಾಲಯದ ಬಳಿ ಸೇರಿ, ನಂತರ ಒಂದರ ಹಿಂದೆ ಒಂದರಂತೆ ಪಟ್ಟಣದ ಪ್ರಮುಖ ರಸ್ಥೆಗಳಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಅದಕ್ಕಾಗಿ ಈಗಾಗಲೇ ಗ್ರಾಮ ಸಮಿತಿ, ಯುವಕ ಸಂಘಗಳು ಸ್ತಬ್ಧಚಿತ್ರಗಳ ತಯಾರಿಯಲ್ಲಿ ನಿರತವಾಗಿವೆ.

ಹಬ್ಬದ ಅಂಗವಾಗಿ ಆಂಜನೆಯ ದೇವಾಲಯದಲ್ಲಿ ಶ್ರೀರಾಮನ ಉತ್ಸವ ಮೂರ್ತಿಗೆ ದಿನಕ್ಕೊಂದರಂತೆ ಶ್ರೀಗಂಧ, ವೀಳ್ಯದೆಲೆ, ಬೆಣ್ಣೆ, ಕೇಸರಿ, ತುಳಸಿ, ಕುಂಕುಮ, ಹೂವಿನ ಮತ್ತು ಮುತ್ತಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಮಾರ್ಚ್ 27ರ ಸಂಜೆ 6 ಗಂಟೆಯಿಂದ ಶ್ರೀರಾಮಾಂಜನೇಯೋತ್ಸವ ಮೆರವಣಿಗೆ ಪಟ್ಟಣದಲ್ಲಿ ನಡೆಯಲಿದೆ. ಕಳೆದ 60 ವರ್ಷಗಳಿಂದಲೂ ಅಂಜನೇಯ ದೇವಾಲಯದಲ್ಲಿ ರಾಮನವಮಿ ಆಚರಿಸಿಕೊಂಡು ಬರಲಾಗುತ್ತಿದೆ. 27ರಂದು ಭಕ್ತರಿಗೆ ಪಾನಕ ವಿತರಣೆ, ಅನ್ನದಾನ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ತಿಳಿಸಿದರು.

ಆಂಜನೇಯ ದೇವಾಲಯವನ್ನು ನೂತನವಾಗಿ ₹4.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಶೇ 70ರಷ್ಟು ಕಾಮಗಾರಿ ಮುಗಿದಿವೆ. ದೇವಾಲಯ ನಿರ್ಮಾಣಕ್ಕೆ ಆನೇಕ ದಾನಿಗಳು ಧನಸಹಾಯ ಮಾಡಿದ್ದಾರೆ. ಆದಷ್ಟು ಶೀಘ್ರವಾಗಿ ದೇವಾಲಯವನ್ನು ಲೋಕಾರ್ಪಣೆಗೊಳಿಸಲು ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ತಿಳಿಸಿದರು.

ರಾಮಮಂದಿರದಲ್ಲಿ ರಾಮನವಮಿ

ಪಟ್ಟಣದ ಕುರುಹಿನಶೆಟ್ಟಿ ಸಮಾಜದ ರಾಮ ಮಂದಿರದಲ್ಲಿ ಮಾರ್ಚ್ 27ರಂದು ಶ್ರೀರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು. ಅಂದು ಬೆಳಿಗ್ಗೆ 7ರಿಂದ 10ರ ವರೆಗೆ ಅಲಂಕಾರ ಮಾಡಿ ವಿಶೇಷ ಅಭಿಷೇಕ ಹಾಗೂ ಪಾನಕ ಮತ್ತು ಪ್ರಸಾದ ವಿತರಿಸಲಾಗುವುದು. ಸಂಜೆ 5 ಗಂಟೆಗೆ ಶ್ರೀ ರಾಮ ದೇವರ ಉತ್ಸವ ಮೂರ್ತಿಯನ್ನು ಅಡಪಲ್ಲಕ್ಕಿಯಲ್ಲಿರಿಸಿ ಪಂಚವಾದ್ಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. 6.30ಕ್ಕೆ ವಿ. ಮಾಲಿನಿ ಅಯ್ಯರ್ ಅವರಿಂದ ರಾಮ ಕಥಾ ಮೇರು ಎಂಬ ಹರಿಕಥೆ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಾಲಯದ ಅರ್ಚಕ ಮೋಹನ್ ಮೂರ್ತಿ ಶಾಸ್ತ್ರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.