ಸೋಮವಾರಪೇಟೆ: ಸಮೀಪದ ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿಯ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರ, ಶ್ರೀ ವೀರಭದ್ರೇಶ್ವರ ದೇವರ ಪ್ರತಿಷ್ಠಾಷ್ಟಬಂಧ ಕಾರ್ಯಕ್ರಮ ಬುಧವಾರ ನಡೆಯಿತು.

ಬೆಳಿಗ್ಗೆ 6 ಗಂಟೆಯಿಂದ ಸ್ವಸ್ತಿ ವಾಚನ, ಗಣಯಾಗ, 8 ಗಂಟೆಗೆ ಶ್ರೀ ಮಹಾಗಣಪತಿ, ಶ್ರೀ ಬಸವೇಶ್ವರ, ಶ್ರೀ ವೀರಭದ್ರೇಶ್ವರ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಅಷ್ಟಬಂಧ ಪ್ರಕ್ರಿಯೆ, ಜೀವತತ್ವ ಕಲಶಾಭಿಷೇಕಗಳು, ನ್ಯಾಸಾಧಿಗಳು, ಶ್ರೀ ರುದ್ರಹೋಮ, ಬ್ರಹ್ಮ ಕಲಶ ಮಂಡಲ ರಚನೆ, ಸಂಜೆ 4 ಗಂಟೆಯಿಂದ ಪಂಚವಿಂಶತಿ ಮತ್ತು ನಮೋತ್ತರಶತ ಕಲಶಾಧಿವಾಸ, ಅಧಿವಾಸ ಹೋಮಗಳು ನಡೆಯಿತು.

ತಾ. 24ರಂದು ಬೆಳಿಗ್ಗೆ 6 ಗಂಟೆಯಿಂದ ಗಣಯಾಗ ಕಲಶಾಭಿಷೇಕ, 8.26ಕ್ಕೆ ಬ್ರಹ್ಮ ಕಲಶಾಭಿಷೇಕ, ನ್ಯಾಸಾಧಿಗಳು, ಪ್ರಸನ್ನ ಪೂಜೆ, ದೇವರ ಉತ್ಸವ, ದರ್ಶನ ಬಲಿ, ಮಹಾಪೂಜೆ, ಸ್ವಸ್ತಿ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.

ಪೂಜಾ ಕಾರ್ಯದಲ್ಲಿ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ. ರವಿ, ಉಪಾಧ್ಯಕ್ಷ ಭುವನೇಂದ್ರ, ಕಾರ್ಯದರ್ಶಿ ಅನಿಲ್ ಶೆಟ್ಟಿ, ಖಜಾಂಚಿ ಏಳುಮಲೈ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1850112753

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.