ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ, ಆರೋಗ್ಯ‌ ಸದೃಢತೆಗೆ ಕ್ರೀಡೆ ಮುಖ್ಯ: ಶ್ರೀಲತಾ

Published 9 ಸೆಪ್ಟೆಂಬರ್ 2023, 12:30 IST
Last Updated 9 ಸೆಪ್ಟೆಂಬರ್ 2023, 12:30 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೋತೆಗೆ ವಿವಿಧ ಕ್ರೀಡಾ ಚಟುವಟಿಕೆಗಳ ಕಡೆಗೂ‌ ಹೆಚ್ಚಿನ ಗಮನ ನೀಡಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಚೆಸ್ ಪಂದ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ದೇಹದಲ್ಲಿ ಸದೃಢ ಮನಸ್ಸು ಸ್ಥಾಪಿತವಾಗಿರುತ್ತದೆ. ಉಲ್ಲೇಖಿಸಿ ಶಾರೀರಿಕ ಸ್ವಾಸ್ಥ್ಯ ಹಾಗೂ ಚುರುಕುತನಕ್ಕಾಗಿ, ಆರೋಗ್ಯ ಜೀವನಕ್ಕಾಗಿ ನಮ್ಮಗಳ ಬದುಕಿಗೆ ಕ್ರೀಡೆ ಅವಶ್ಯಕ’ ಎಂದು ತಿಳಿಸಿದರು.

ಪಂದ್ಯ ತೀರ್ಪುಗಾರರಾದ, ಚೆಸ್ ಪಟು ಹರೀಶ್ ಅವರು ಚೆಸ್ ಪಂದ್ಯಾವಳಿಯ ನೀತಿ, ನಿಯಮಾವಳಿಗಳನ್ನು ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮಕ್ಕೈ‌ಮೊದಲು 2023ರಲ್ಲಿ ಫಿಡೆ ವಿಶ್ವಕಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಅತ್ಯಂತ ಕಿರಿಯ ವಯಸ್ಸಿನ ಚೆಸ್ ಆಟಗಾರ ಪ್ರಜ್ಞಾನಂದ ಅವರ ಭಾವಚಿತ್ರಗಳಿರುವ ‘ಪ್ರೇರಣಾ ಫಲಕ’ವನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಾಯಿತು.

ಉಪನ್ಯಾಸಕರಾದ ಈಶ, ಸುನೀತಾ, ಸುಚಿತ್ರಾ, ಕವಿತಾ ಭಕ್ತಾ, ಕವಿತಾ, ಕನಕ ಸೇರಿದಂತೆ ತಾಲ್ಲೂಕಿನ 20 ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಸುಂಟಿಕೊಪ್ಪ ‌ಪಿಯು ಕಾಲೇಜಿನಲ್ಲಿ ನಡೆದ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯ ಅಂಗವಾಗಿ ಭಾರತೀಯ ಕಿರಿಯ ಚೆಸ್ ಆಟಗಾರ ಪ್ರಜ್ಞಾನಂದ ಅವರ ಭಾವಚಿತ್ರವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಅವರು ಅನಾವರಣ ಗೊಳಿಸಿದರು.
ಸುಂಟಿಕೊಪ್ಪ ‌ಪಿಯು ಕಾಲೇಜಿನಲ್ಲಿ ನಡೆದ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯ ಅಂಗವಾಗಿ ಭಾರತೀಯ ಕಿರಿಯ ಚೆಸ್ ಆಟಗಾರ ಪ್ರಜ್ಞಾನಂದ ಅವರ ಭಾವಚಿತ್ರವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಅವರು ಅನಾವರಣ ಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT