10ರಿಂದ ನಾಮಪತ್ರ ಸಲ್ಲಿಕೆ ಆರಂಭ

6
ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ

10ರಿಂದ ನಾಮಪತ್ರ ಸಲ್ಲಿಕೆ ಆರಂಭ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರದ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗು ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಇಲ್ಲಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಡಿಕೇರಿ ನಗರಸಭೆ ಹೊರತುಪಡಿಸಿ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ 11 ವಾರ್ಡ್‌, ಕುಶಾಲನಗರದ 16 ವಾರ್ಡ್‌, ವಿರಾಜಪೇಟೆಯ 18 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಮತದಾರರ ವಿಂಗಡಣೆ: ಸೋಮವಾರಪೇಟೆಯಲ್ಲಿ 2,562 ಪುರುಷ ಮತದಾರರು ಇದ್ದರೆ, 2,699 ಮಹಿಳಾ ಮತದಾರರು ಇದ್ದಾರೆ. ಕುಶಾಲನಗರದಲ್ಲಿ 5,899 ಪುರುಷ ಹಾಗೂ 5,700 ಮಹಿಳಾ ಮತದಾರರು ಇದ್ದಾರೆ. ವಿರಾಜಪೇಟೆ ಪಟ್ಟಣದಲ್ಲಿ 6,998 ಪುರುಷ ಹಾಗೂ 6,925 ಮಹಿಳಾ ಮತದಾರರು ಇದ್ದಾರೆ. ಇದೇ 17ರ ತನಕವೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಸೋಮವಾರಪೇಟೆಯಲ್ಲಿ 11, ಕುಶಾಲನಗರದಲ್ಲಿ 16 ಹಾಗೂ ವಿರಾಜಪೇಟೆಯಲ್ಲಿ 18 ಮತಗಟ್ಟೆ ಸ್ಥಾಪಿಸಲಾಗುವುದು ಎಂದು ಶ್ರೀವಿದ್ಯಾ ಮಾಹಿತಿ ನೀಡಿದರು.

ಮೇಲುಸ್ತುವಾರಿಗೆ ಅಧಿಕಾರಿಗಳ ನೇಮಕ: ಚುನಾವಣೆಯ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳಲು ವಿವಿಧ ನೋಡಲ್‌ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಕುಶಾಲನಗರಕ್ಕೆ ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಸೋಮವಾರಪೇಟೆಗೆ ಐಟಿಡಿಪಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್‌, ವಿರಾಜಪೇಟೆಗೆ ಕೃಷಿ ಇಲಾಖೆಯ ಉಪ ನಿರ್ದೇಶಕ ಕೆ.ರಾಜು ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ನೀತಿ ಸಂಹಿತೆ ಜಾರಿ: ಇದೇ 2ರಿಂದಲೇ ನೀತಿ ಸಂಹಿತೆ ಜಾರಿಗೊಂಡಿದ್ದು, ಸೆ.1ರ ತನಕವೂ ಜಾರಿಯಲ್ಲಿ ಇರಲಿದೆ. ಮಡಿಕೇರಿ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ನೀತಿ ಸಂಹಿತೆ ಅನ್ವಯ ಆಗುವುದಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ, ಕಂಟ್ರೋಲ್‌ ರೂಂ: 08272 221077ಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಸೋಮವಾರಪೇಟೆಯ 1ರಿಂದ 11 ವಾರ್ಡ್‌ಗೆ ನಾಗರಾಜಯ್ಯ (ಮೊಬೈಲ್‌: 94806 95261), ಮೇಘನಾಥ್‌ (99005 00186), ಕುಶಾಲನಗರದ 1ರಿಂದ 8ನೇ ವಾರ್ಡ್‌ಗೆ ಬಿ.ಡಿ. ಸುನಿಲ್‌ (98805 97289), ಕೆ.ಆರ್‌. ರವಿಕುಮಾರ್‌ (94487 90327), ಕುಶಾಲನಗರದ 9ರಿಂದ 16ನೇ ವಾರ್ಡ್‌ಗೆ ಧರ್ಮರಾಜ್‌ (94488 25957), ಟಿ.ಪಿ. ಸತ್ಯ (97430 71171) ಹಾಗೂ ವಿರಾಜಪೇಟೆಯ 1ರಿಂದ 9ನೇ ವಾರ್ಡ್‌ಗೆ ಎಂ.ಇ. ಸುರೇಶ್‌ (94485 04368), ಅರುಣ್‌ ಭಾಸ್ಕರ್‌ (79961 98956), 10ರಿಂದ 18ನೇ ವಾರ್ಡ್‌ಗೆ ಜಿ.ಎ. ಲೋಕೇಶ್‌ (94806 95262), ಜಲೇಂದ್ರ (99863 45695) ಅವರನ್ನು ನೀತಿ ಸಂಹಿತೆ ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

10 ಸೂಕ್ಷ್ಮ ಮತಗಟ್ಟೆಗಳು: ಸೋಮವಾರಪೇಟೆಯ 11 ಮತಗಟ್ಟೆಗಳಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳಾಗಿವೆ. ಕುಶಾಲನಗರ 16 ಮತಗಟ್ಟೆಗಳಲ್ಲಿ 4 ಸೂಕ್ಷ್ಮ, 3 ಅತೀ ಸೂಕ್ಷ್ಮ, 9 ಸಾಮಾನ್ಯ ಮತಗಟ್ಟೆ ಆಗಿವೆ. ವಿರಾಜಪೇಟೆಯ 18ರಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ, 13 ಸಾಮಾನ್ಯ ಮತಗಟ್ಟೆಗಳು ಎಂದು ಶ್ರೀವಿದ್ಯಾ ಮಾಹಿತಿ ನೀಡಿದರು.

ಮಸ್ಟರಿಂಗ್‌ ಹಾಗೂ ಡಿ ಮಸ್ಟರಿಂಗ್‌ ಕಾರ್ಯವು ಸೋಮವಾರಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜು, ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಸಲಾಗುವುದು. ಅದೇ ಕಾಲೇಜಿನಲ್ಲಿ ಸೆ. 1ರಂದು ಮತ ಎಣಿಕೆ ನಡೆಯಲಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಗೂ ವಿದ್ಯುನ್ಮಾನ ಮತಯಂತ್ರಗಳನ್ನೇ ಬಳಸಲಾಗುತ್ತಿದೆ. ವಿವಿ ಪ್ಯಾಟ್‌ ಮಾತ್ರ ಬಳಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !