ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ವಿದ್ಯಾರ್ಥಿ ಸಂಘ ರಚನೆ

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
Last Updated 20 ಜುಲೈ 2019, 14:33 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದಿದೆ.

ಅಧ್ಯಕ್ಷರಾಗಿ ಕಾಲೇಜ್‌ನ ಪ್ರಾಂಶುಪಾಲೆ ಪ್ರೊ.ವೈ.ಕೆ. ಚಿತ್ರಾ, ಉಪಾಧ್ಯಕ್ಷರಾಗಿ ಬಿ.ಪಿ. ವಿಕಾಸ್‌ ಹಾಗೂ ಕಾರ್ಯದರ್ಶಿಯಾಗಿ ಕೆ.ಪಿ.ಪ್ರತಾಪ್ ಆಯ್ಕೆ ಆಗಿದ್ದಾರೆ.

ಸಂಘದ ರಚನೆ ಸಂಬಂಧ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಸಹ ಕಾರ್ಯದರ್ಶಿಯಾಗಿ ಸಲ್ಮಾ ಖಾನಂ, ಖಜಾಂಚಿಯಾಗಿಎಂ.ಶಿವರಾಜ್‌ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಹಳೇ ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಕೆ.ಸಿ. ದಯಾನಂದ ಮಾತನಾಡಿ, ಕಾಲೇಜು ಪ್ರಾರಂಭವಾಗಿ 12 ವರ್ಷ ಕಳೆದರೂ ಹಳೇ ವಿದ್ಯಾರ್ಥಿ ಸಂಘ ರಚನೆಗೊಂಡಿರಲಿಲ್ಲ. ಇನ್ನು ಮುಂದೆ ಹಳೇ ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೋರಿದರು.

2019– 20ನೇ ಸಾಲಿನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇ ವಿದ್ಯಾರ್ಥಿ ಸಂಘ, ಮಡಿಕೇರಿ ಎಂದು ನೋಂದಣಿ ಮಾಡಿಸಿ ಇನ್ನು ಹೆಚ್ಚಿನ ಸದಸ್ಯರು ನೇಮಿಸಿ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ವೈ.ಕೆ. ಚಿತ್ರಾ ಮಾತನಾಡಿ, ನೂತನ ಸಮಿತಿಯು ಮುಂದಿನ ಅಧಿಕಾರಾವಧಿಯಲ್ಲಿಕಾಲೇಜಿನ ಪ್ರಗತಿ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುವುದು ಮತ್ತು ಶೈಕ್ಷಣಿಕಬೆಳವಣಿಗೆ, ಸಾಮಾಜಿಕ ಕಳಕಳಿ ಸೇರಿದಂತೆ ಸೇವಾ ಮನೋಭಾವದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ನೋಂದಣಿ ಕಾರ್ಯ ಶೀಘ್ರ ಆಗಬೇಕು, ಕನಿಷ್ಠ ಎರಡು ತಿಂಗಳಿಗೊಮ್ಮೆ ಹಾಗೂ ತುರ್ತು ಸಂದರ್ಭದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಯಿತು.

ಸಂಘದ ಪ್ರಾಧ್ಯಾಪಕರಾದಬಿ.ಆರ್. ಶಶಿಧರ್‌, ಪದಾಧಿಕಾರಿಗಳಾದ ಎಂ.ಜಿ. ದೀಪಕ್‌, ಬಿ.ಆರ್. ಕಾರ್ತಿಕ್‌, ಬಿ.ಎನ್. ಸುಮಂತ್, ಚರಣ್‌ ರಾಜ್‌, ಪವನ್‌ ಕುಮಾರ್, ಲಿಕ್ಕಿತಾ, ಪ್ರಿಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT