ಸುಂಟಿಕೊಪ್ಪ: ಗ್ರಾಮ ಪಂಚಾಯಿತಿಗೆ ಸೇರಿದ ಗದ್ದೆಹಳ್ಳದಲ್ಲಿ ನಿರ್ಮಿಸಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಮುಚ್ಚುವ ಆತಂಕ ಎದುರಾಗಿದೆ.

ಸುಂಟಿಕೊಪ್ಪದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಷ್ಟವಾಗಿತ್ತು. ಆ ಕಾರಣ 1982 -83ರ ಅವಧಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಟ್ಟಣದ ಎರಡನೇ ವಿಭಾಗದಲ್ಲಿ ಬಾಡಿಗೆಗೆ ಬಾಲಕರ ವಸತಿ ನಿಲಯವನ್ನು ಪ್ರಾರಂಭಿಸಲಾಯಿತು.

ಆ ಸಮಯದಲ್ಲಿ ಸುಮಾರು 50-60ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದರು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಈ ವಸತಿ ನಿಲಯವು 1985ರಲ್ಲಿ ನಾರ್ಗಾಣೆ ಗ್ರಾಮದ ರಾಧಾ ಬೆಳ್ಳಿಯಪ್ಪ ಅವರ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಬಾಡಿಗೆ ಕಟ್ಟಡದಲ್ಲಿ ಈ ವಸತಿ ನಿಲಯ ಮುಂದುವರಿದಿತ್ತು.

ಪ್ರಾರಂಭದಲ್ಲಿ ಕೇವಲ 40 ರಿಂದ 50ರಷ್ಟು ಇದ್ದ ವಿದ್ಯಾರ್ಥಿಗಳ ಸಂಖ್ಯೆ ನಂತರದ ದಿನಗಳಲ್ಲಿ ನೂರರ ಗಡಿಯನ್ನು ದಾಟಿತ್ತು. ಇದನ್ನು ಮನಗಂಡ ಸರ್ಕಾರ ಗದ್ದೆಹಳ್ಳದಲ್ಲಿ ಸ್ಥಳೀಯ ದಾನಿಗಳಾದ ಪಟ್ಟೆಮನೆ ಕುಟುಂಬಸ್ಥರು ದಾನವಾಗಿ ನೀಡಿದ ಜಾಗದಲ್ಲಿ 1994ರಲ್ಲಿ ಸುಸಜ್ಜಿತವಾದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನಿರ್ಮಿಸಿತ್ತು.

1994ರಿಂದ 2024 -25ರವರೆಗೂ ಈ ವಸತಿ ನಿಲಯ ವಿದ್ಯಾರ್ಥಿಗಳ ಆಶ್ರಯಕ್ಕೆ ಪ್ರಬುದ್ಧ ಅಡಿಪಾಯವಾಗಿದೆ. ಆದರೆ ಐದಾರು ವರ್ಷಗಳಿಂದ ಈ ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು, ಈ ಬಾರಿ ರಾಜ್ಯ ಸರ್ಕಾರ ಈ ವಿಚಾರ ಅರಿತು ಈ ವಿದ್ಯಾರ್ಥಿನಿಲಯವನ್ನು ಕುಶಾಲನಗರಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಆದರೆ, ಈಗಾಗಲೇ ಕಳೆದ ವರ್ಷದವರೆಗೆ ಪ್ರವೇಶ ಪಡೆದ 13 ವಿದ್ಯಾರ್ಥಿಗಳಿದ್ದರೂ ಸರ್ಕಾರ ಈ ಬಾರಿಯ ವಸತಿ ನಿಲಯಕ್ಕೆ ಪ್ರವೇಶಾತಿಯನ್ನು ಮಕ್ಕಳಿಗೆ ಆನ್ಲೈನ್ ಪ್ರವೇಶವನ್ನು ರದ್ದುಪಡಿಸಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಈ ವಸತಿ ನಿಲಯಕ್ಕೆ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸದ ಸರ್ಕಾರ ಅತ್ಯಂತ ಸೌಲಭ್ಯವನ್ನು ಒಳಗೊಂಡ ಈ ಸುಂಟಿಕೊಪ್ಪದ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಏಕಾಏಕಿ ಸ್ಥಳಾಂತರ ಮಾಡುವುದಕ್ಕೆ ಏಕೆ ನಿರ್ಧಾರ ಮಾಡಿದೆ ಎನ್ನುವ ಯಕ್ಷಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರದ್ದು.

ಕೂಡಲೇ ಸರ್ಕಾರ ಮತ್ತು ಇಲಾಖೆಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಸತಿ ನಿಲಯವನ್ನು ಸ್ಥಳಾಂತರಿಸಬಾರದು. ಬಹುಕಾಲದಿಂದ ಉಳಿದುಕೊಂಡಿರುವ ಸುಸಜ್ಜಿತ ಕಟ್ಟಡ ಶಿಥಿಲಾವಸ್ಥೆ ತಲುಪದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ನಿಲಯವನ್ನು ಮುಂದುವರಿಸಿಕೊಂಡು ಹೋಗುವಂತೆ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಹಳೆಯ ವಿದ್ಯಾರ್ಥಿಗಳಾದ ಸುನಿಲ್, ಆರ್.ಎಚ್.ಶರೀಫ್, ರಜಾಕ್, ಅಬ್ಧುಲ್ ಅಜೀಜ್, ಸಿ.ಮಹೇಂದ್ರ, ಹರೀಶ, ಅನಿಲ್, ಧನುಕಾವೇರಪ್ಪ, ಎಸ್.ಪಿ.ಸಂದೀಪ್ ಬಿ.ಕೆ.ಮೋಹನ ಒತ್ತಾಯಿಸಿದ್ದಾರೆ.

ದಶಕಗಳಷ್ಟು ಹಳೆಯ ಹಾಸ್ಟೆಲ್ ಸ್ಥಳಾಂತರ ಆನ್ಲೈನ್ ಪ್ರವೇಶಕ್ಕಿಲ್ಲ ಅವಕಾಶ ಗ್ರಾಮಸ್ಥರಲ್ಲಿ ಮೂಡಿದ ಆತಂಕ

ಮಕ್ಕಳ ಸಂಖ್ಯೆ ಕಡಿಮೆ ಇರುವ ಹಾಸ್ಟೆಲ್ ಅನ್ನು ಮಕ್ಕಳ ಸಂಖ್ಯೆ ಹೆಚ್ಚಿರುವ ಕಡೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿರುವ ಮಕ್ಕಳನ್ನು ಸಮೀಪದ ಹಾಸ್ಟೆಲ್ಗೆ ದಾಖಲಿಸಲಾಗುವುದು
ಶೇಖರ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಜಿಲ್ಲಾ ಅಧಿಕಾರಿ

43 ವರ್ಷಗಳಿಂದ ಸುಂಟಿಕೊಪ್ಪದಲ್ಲಿರುವ ಈ ಬಾಲಕರ ವಸತಿ ನಿಲಯವನ್ನು ಸ್ಥಳಾಂತರಿಸುವುದು ಸರಿಯಲ್ಲ. ಇದರಿಂದ ಸುತ್ತಲಿನ ವಿದ್ಯಾರ್ಥಿಗಳಿಗ ತೊಂದರೆಯಾಗಲಿದೆ
ಪಿ.ಆರ್ ಸುನಿಲ್ ಕುಮಾರ್ ಗ್ರಾ.ಪಂ. ಅಧ್ಯಕ್ಷ

ಸೌಲಭ್ಯ ಹೊಂದಿರುವ ವಸತಿ ನಿಲಯ ಈ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಬಹಳಷ್ಟು ಕಾಮಗಾರಿಗಳು ನಡೆದಿದೆ. ಕೊಡಗಿನ ಯಾವುದೇ ವಸತಿ ನಿಲಯಗಳಲ್ಲಿ ಇಲ್ಲದಂತಹ ಸುಸಜ್ಜಿತವಾದ ಆರೋಗ್ಯಕರ ವಾತಾವರಣದಿಂದ ಕೂಡಿದ ವಸತಿ ನಿಲಯ ಇದಾಗಿದೆ. ಸೋಲಾರ್ ಬಳಕೆ ಬಿಸಿನೀರಿನ ಸೌಲಭ್ಯ ಅತ್ಯಂತ ಶುಭ್ರವಾದ ಹಾಸಿಗೆಗಳು ಕಂಪ್ಯೂಟರ್ ಕಲಿಕೆಗೆ ಬೇಕಾದಂತಹ ಸೌಲಭ್ಯಗಳು ಎಲ್ಲವೂ ಕೂಡ ಈ ವಸತಿ ನಿಲಯದಲ್ಲಿ ಇದ್ದರೂ ಕೂಡ ವಿದ್ಯಾರ್ಥಿಗಳ ಕೊರತೆಯ ಕಾರಣವನ್ನು ಮುಂದಿಟ್ಟು ಇಲಾಖೆ ಈ ನಿರ್ಧಾರ ಮಾಡಿರುವುದು ಸರಿಯಲ್ಲ ಎಂಬುದು ಪೋಷಕರ ಆರೋಪ. ಇನ್ಫೋಗ್ರಾಫ್ಗೆ... ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್ ಸಂಖ್ಯೆ ಮೆಟ್ರಿಕ್ ಪೂರ್ವ;19 ಮೆಟ್ರಿಕ್ ನಂತರ;21 ಒಟ್ಟು;40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.