ಸುಂಟಿಕೊಪ್ಪ: ಸಮೀಪದ ಮಂಜಿಕೇರಿಯ ಆದಿಶಕ್ತಿ ಚಾಮುಂಡೇಶ್ವರಿ ಹಾಗೂ ಪಾಷಾಣಮೂರ್ತಿ ಅಮ್ಮನವರ ದೇವಸ್ಥಾನದ 5ನೇ ವರ್ಷದ ದೈವಕೋಲ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವಾರ್ಷಿಕೋತ್ಷವಕ್ಕೆ ಚಾಲನೆ ನೀಡಲಾಯಿತು. ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ಕಳಸ ಮೆರವಣಿಗೆ ನಡೆಯಿತು.ಮದ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ರಾತ್ರಿ 7 ಗಂಟೆಗೆ ನೇಮೋತ್ಸವದ ಅಂಗವಾಗಿ ಭಂಡಾರ ಪೂಜೆ, ಮೆರವಣಿಗೆ ನಡೆದ ನಂತರ ರಾತ್ರಿ ಕಲ್ಲುರ್ಟಿ- ಕಲ್ಕುಡ ದೈವಗಳ ನೇಮ, ಚಾಮುಂಡಿ ಗುಳಿಗ ದೈವಗಳ ನೇಮ, ಭದ್ರಕಾಳೇಶ್ವರಿ ದೈವದ ನೇಮ, ಕೊರಗ ತನಿಯ ದೈವಗಳ ಕೋಲ ನೇಮೋತ್ಸವ ಭಾನುವಾರ ಬೆಳಿಗ್ಗೆಯವರೆಗೆ ನಡೆಯಿತು.

ಇದೇ ವೇಳೆ ನೆರೆದಿದ್ದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೈವಗಳಲ್ಲಿ ಬೇಡಿಕೊಂಡರು. ಅಲ್ಲದೇ ಹರಕೆ ಅರ್ಪಿಸಿದರು. ಸ್ಥಳೀಯರು ಮಾತ್ರವಲ್ಲದೇ ಜಿಲ್ಲೆ, ಹೊರಜಿಲ್ಲೆಗಳ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-51-1430651219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.