ಸುಂಟಿಕೊಪ್ಪ: ಸಮೀಪದ ಗದ್ದೆಹಳ್ಳದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಎಂಜಿನಿಯರಿಂಗ್ ಮಾರ್ಟ್ ಅಂಗಡಿ ಬುಧವಾರ ರಾತ್ರಿ ಹೊತ್ತು ಹುರಿದಿದೆ.

ಶರತ್ ಅವರಿಗೆ ಸೇರಿದ ಹೆಮ್ಮರ ಎಂಜಿನಿಯರಿಂಗ್ ಮಾರ್ಟ್ ಅಂಗಡಿಯಲ್ಲಿ ಪೇಂಟ್ ಸೇರಿದಂತೆ ಚಾವಣಿ ಪ್ಲಾಸ್ಟಿಕ್ ಶೀಟುಗಳು ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮಾರ್ಟ್ ಒಳಗೆ ಯಾರೂ ಇಲ್ಲದಿದ್ದರಿಂದ ಪ್ರಾಣ ಹಾನಿ ತಪ್ಪಿದೆ. ಮಳಿಗೆಯಲ್ಲಿ ಜ್ವಾಲೆ ಹರಡುತ್ತಿರುವುದನ್ನು ಅರಿತ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಎಂ. ಲತೀಫ್, ವರ್ಕ್ಸ್ ಶಾಪ್ ಮಾಲೀಕರ ಸಂಘದವರು, ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಲ್ಲದೇ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡದಂತೆ ಎಚ್ಚರಿಕೆವಹಿಸಿದರು. ಕುಶಾಲನಗರ ಮತ್ತು ಮಡಿಕೇರಿ ಅಗ್ನಿ ಶಾಮಕ ದಳದವರು ಬಂದು ಬೆಂಕಿಯನ್ನು ಹತೋಟಿಗೆ ತಂದರು.

ಶರತ್ ಅವರು ಸುಳ್ಯಕ್ಕೆ ತೆರಳಿದ್ದರಿಂದ ತಮ್ಮ ಕಾರನ್ನು ಅಂಗಡಿಯ ಒಳಭಾಗದಲ್ಲಿ ನಿಲ್ಲಿಸಿದ್ದರು. ಕೂಡಲೇ ಒಳನುಗ್ಗಿದ ಜನ ಕಾರಿನ ಗಾಜನ್ನು ಹೊಡೆದು ಹೊರತಂದರು.

ಅವಘಡದಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಪೊಲೀಸರು ಸುಗಮಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-2104348851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.