ಸುಂಟಿಕೊಪ್ಪ: ಸರ್ವ ಜನಾಂಗದ ಶಾಂತಿಯ ತೋಟ ಎಂದೇ ಹೆಸರುವಾಸಿಯಾಗಿರುವ ಸುಂಟಿಕೊಪ್ಪದ ಹೃದಯ ಭಾಗದಲ್ಲಿ ನಿರ್ಮಿಸಿರುವ ಕನ್ನಡ ವೃತ್ತ ಈ ಬಾರಿಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

ಕಳೆದ 30 ರ್ಷಗಳಿಂದ ವಿವಿಧ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಹೆಗ್ಗಳಿಕೆ ಈ ವೃತ್ತಕ್ಕಿದೆ. ಕಳೆದ 29 ವರ್ಷಗಳ ಹಿಂದೆ ಪುಟ್ಟದಾದ ಕನ್ನಡ ವೃತ್ತವನ್ನು ನಿರ್ಮಿಸಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿತ್ತು. ಕಾವೇರಿ ಕನ್ನಡ ಕಲಾಸಂಘವು, ಸುಂಟಿಕೊಪ್ಪ ಪ್ರತಿಭಾ ಬಳಗ ಸದಸ್ಯರು ಈ ಹೃದಯ ಭಾಗದ ಈ ಪುಟ್ಟ ವೃತ್ತದಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕ್ಲಾಡಿಯಾಸ್ ಲೋಬೋ ಅವರ ಪರಿಶ್ರಮದಿಂದ ಈ ಸ್ಥಳದಲ್ಲಿ ಸಿಮೆಂಟ್ ತೊಟ್ಟಿ ಸಿದ್ದವಾಗಿ ಕನ್ನಡ ವೃತ್ತಕ್ಕೆ ಶಾಶ್ವತ ನೆಲೆ ಸಿದ್ಧಕೊಂಡಿತ್ತು.

ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡುತ್ತಿರುವ ವೇಳೆ ಹೆದ್ದಾರಿ ಪ್ರಾಧಿಕಾರವು ಈ ಸಿಮೆಂಟು ತೊಟ್ಟಿಯನ್ನು ತೆರವುಗೊಳಿಸಿತು. ಕಾಮಗಾರಿ ಮುಗಿದ ನಂತರ ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಲು ಹೋದಾಗ ಪೊಲೀಸರು ಅಡ್ಡಿಪಡಿಸಿದರು. ಚುಟುಕು ಸಾಹಿತಿ ವಹೀದ್ ಜಾನ್ ವಿನ್ಸೆಂಟ್ ಸೇರಿದಂತೆ ಇತರರು ಪಟ್ಟು ಹಿಡಿದು ಸಿಮೆಂಟ್ನಿಂದ ವೃತ್ತವನ್ನು ನಿರ್ಮಿಸಿ ವೃತ್ತಕ್ಕೆ ಅರಿಸಿನ- ಕೆಂಪು ಬಣ್ಣದ ಪೇಂಟ್ ಹಚ್ಚಿ ಕನ್ನಡ ವೃತ್ತ ಎಂದು ಬರೆಯಿಸಿದರು. ನಂತರ ಸ್ನೇಹಿತರ ಕೂಟದ ಸದಸ್ಯರು ಕನ್ನಡ ರಾಜ್ಯೋತ್ಸವದ ಹೊಣೆ ಹೊತ್ತುಕೊಂಡರು. ನಂತರದ ದಿನಗಳಲ್ಲಿ ನಮ್ಮ ಸುಂಟಿಕೊಪ್ಪ ಬಳಗ ಇದರ ಉಸ್ತುವಾರಿ ವಹಿಸಿಕೊಂಡಿತು. 2019ರಲ್ಲಿ ಈ ವೃತ್ತಕ್ಕೆ 25 ವರ್ಷ ತುಂಬಿದ್ದರಿಂದ ನಮ್ಮ ಸುಂಟಿಕೊಪ್ಪ ಬಳಗದ ಸದಸ್ಯರು ಕನ್ನಡ ವೃತ್ತಕ್ಕೆ ದಾನಿಗಳ ಸಹಾಯದಿಂದ ಸ್ಟೀಲ್ ನಿಂದ ಅ ದಿಂದ ಅಃ ದವರೆಗಿನ ಕನ್ನಡ ಅಕ್ಷರಮಾಲೆಯ ರಕ್ಷಣಾ ಕವಚ ಅಳವಡಿಸಿದ್ದರು.

2020ರ ನಂತರ ಈ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಂಡಿದೆ. ವರ್ಷದ 365 ದಿನವೂ ಇಲ್ಲಿ ಕನ್ನಡದ ಬಾವುಟ ಇರುವುದು ವಿಶೇಷ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-51-1619042647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.