ಸುಂಟಿಕೊಪ್ಪ: 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಅದ್ದೂರಿಯಾಗಿ ಶುಕ್ರವಾರ ನಡೆಯಿತು.

ಜಿ.ಎಂ.ಪಿ ಶಾಲಾ ಮೈದಾನದಿಂದ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಉದ್ಯಮಿ ಎಸ್.ಜಿ.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉದ್ಘಾಟಿಸಿದರು. ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಹಲವು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕೊಪ್ಪದ ನಾದಸ್ವರ ಮುಂಚೂಣಿಯಲ್ಲಿದ್ದು, ವಿವಿಧ ಸ್ರ್ತೀ ಶಕ್ತಿ ಸಂಘಟನೆಯ ಕಾರ್ಯಕರ್ತೆಯರು ಪೂರ್ಣ ಕುಂಭ ಕಳಸದೊಂದಿಗೆ ಸಮ್ಮೇಳನಾಧ್ಯಕ್ಷರಿಗೆ ಗೌರವ ನೀಡಿದರು. ಬೆಳ್ಳಿ ರಥದಲ್ಲಿ ಭುವನೇಶ್ವರಿಯ ಆಕರ್ಷಕ ಮೂರ್ತಿಯೂ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು.

ಕೊಡಗಿನ ವಾಲಗ, ಕೇರಳದ ಚಂಡೆ ವಾದ್ಯ, ನಾಸಿಕ್ ಬ್ಯಾಂಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡೊಳ್ಳು ಕುಣಿತ, ಗೊಂಬೆ ಕುಣಿತ ನೋಡುಗರನ್ನು ಆಕರ್ಷಿಸಿತು. ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಾದ್ಯಗೋಷ್ಠಿ, ಎನ್ಸಿಸಿ ಕೆಡೆಟ್ಗಳು ಅಧ್ಯಕ್ಷರಿಗೆ ಗೌರವ ಸೂಚಿಸಿದರು. ಇವರೊಂದಿಗೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೈ ಜೋಡಿಸಿದರು. ಗೌಡ ಸಮಾಜ, ಕೊಡವ ಸಮಾಜದ ಸದಸ್ಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿದರು. ಶ್ವೇತ ವರ್ಣದ ಕುದುರೆಗಳು ಮೆರವಣಿಗೆಯಲ್ಲಿ ಶಿಸ್ತು ಬದ್ಧವಾಗಿ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸೂಜಿಗಲ್ಲಿನಂತೆ ಸೆಳೆಯಿತು. ಸೆಸ್ಕ್ ವತಿಯಿಂದ ವಿದ್ಯುತ್ ಜನ ಜಾಗೃತಿ ಸ್ತಬ್ಥಚಿತ್ರ ನೋಡುಗರಲ್ಲಿ ಅರಿವು ಮೂಡಿಸಿತು. ಕನ್ನಡದ ಜಯಘೋಷದೊಂದಿಗೆ ಮೆರವಣಿಗೆಯು ಜಿಎಂಪಿ ಶಾಲಾ ಮೈದಾನದಿಂದ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಗದ್ದೆಹಳ್ಳದ ಎಸ್.ಎಸ್.ಸಭಾಂಗಣದವರೆಗೆ ಸಾಗಿ ಅಲ್ಲಿ ಸಮಾಪ್ತಿಗೊಂಡಿತು.

ಮೆರವಣಿಗೆ ಸಮಿತಿ ಅಧ್ಯಕ್ಷ ಸುನಿಲ್, ಸಂಚಾಲಕ ಆದಂ ರಫೀಕ್, ಕಾರ್ಯದರ್ಶಿ ಧನುಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ಸಾವಿತ್ರಿ, ಚಿತ್ರಾ, ಲೀಲಾವತಿ, ಜೆಸ್ಸಿ ಡಿಸೋಜ, ಸ್ವರ್ಣ, ಸರಳಾ, ಅಬ್ಶುಲ್ ಅಜಿಜ್, ವಿನ್ಸೆಂಟ್, ಆರ್.ಎಚ್ ಶರೀಫ್, ಕಿಟ್ಟಣ್ಣ ರೈ, ನಾಗರತ್ನ, ಶರೀಫ್, ಬಿ.ಕೆ.ಪ್ರಶಾಂತ್, ಸುರೇಶ್, ಗೋಪಿ, ಪಿಡಿಒ ಲೋಕೇಶ್, ಸೆಸ್ಕ್ ಜೆಇ ಲವ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-965847806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.