ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ಚರ್ಚ್ ವಾರ್ಷಿಕ ಮಹೋತ್ಸವವು ಇದೇ 7 ರಿಂದ 10 ರವರೆಗೆ ಧ್ವಜಾರೋಹಣ ಹಾಗೂ ಆಡಂಬರ ಬಲಿಪೂಜೆಯೊಂದಿಗೆ ಸಂಭ್ರಮದಿಂದ ನಡೆಯಲಿದೆ.

ಮೇ 7ರಂದು ಸಂಜೆ 5.30 ಗಂಟೆಗೆ ಧ್ವಜಾರೋಹಣ ಹಾಗೂ ಆಡಂಬರ ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನಾ ನೆರವೇರಿಸಲಿದ್ದಾರೆ.

ಹಬ್ಬದ ಸಿದ್ಧತೆಯಾಗಿ ಮೇ 8 ರಂದು ಸಂಜೆ 5.30 ಗಂಟೆಗೆ ಬಲಿಪೂಜೆ ಹಾಗೂ ಆರಾಧನೆಯನ್ನು ಕೆ.ಆರ್.ಪೇಟೆಯ ಬಾಲ ಯೇಸುವಿನ ದೇವಾಲಯದ ಧರ್ಮಗುರು ಟಿ.ಪೌಲೂಸ್ ಹಾಗೂ ದೇವಾಲಯದ ಧರ್ಮಗುರು ವಿಜಯಕುಮಾರ್ ನೆರವೇರಿಸಲಿದ್ದಾರೆ.

ಮೇ 9 ರಂದು ಮಕ್ಕಳಿಗೆ ನೂತನ ಪರಮ ಪ್ರಸಾದ ಸಂಸ್ಕಾರ ಮತ್ತು ಆಡಂಬರ ದಿವ್ಯ ಬಲಿಪೂಜೆಯನ್ನು ಏರ್ಕಾರ್ಡ್ ಎಸ್ಟೇಟ್ ಸಹಾಯಕ ಧರ್ಮಗುರು ಚಾರ್ಲ್ಸ್ ಪೆರಿಯನಾಗಮ್ ಅವರು ನೆರವೇರಿಸಲಿದ್ದಾರೆ.

ಮೇ 10ರಂದು ಸಂಜೆ 5.30 ಗಂಟೆಗೆ ಸಂತ ಅಂತೋಣಿಯವರ ಹಬ್ಬದ ಅಂಗವಾಗಿ ಆಡಂಬರ ಗಾಯನ ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷ ಡಾ. ಎಸ್.ಜೆ ಫ್ರಾನ್ಸಿಸ್ ಸೆರಾವೋ ನೆರವೇರಿಸಲಿದ್ದಾರೆ. ಅಂದು ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಮೂರ್ತಿಯ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಲಿದೆ.

ನಂತರ ಪರಮ ಪ್ರಸಾದ ಆರಾಧನೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧಿಕಾರಿ ಡಾ.ಎಸ್.ಜೆ. ಫ್ರಾನ್ಸಿಸ್ ಸೆರಾವೋ ಅವರು ನೆರವೇರಿಸಲಿದ್ದಾರೆ ಎಂದು ಧರ್ಮಗುರು ವಿಜಯಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1287204273

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.