ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ರಾಮಾಯಣ ವಾಲ್ಮೀಕಿ ಜ್ಞಾನದ ಪ್ರತೀಕ

Published 28 ಅಕ್ಟೋಬರ್ 2023, 12:50 IST
Last Updated 28 ಅಕ್ಟೋಬರ್ 2023, 12:50 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ರಾಮಾಯಣ ಮಹಾಗ್ರಂಥ ಭಾರತೀಯ ಸಂಸ್ಕೃತಿ, ಬಾಂಧವ್ಯ ಸಾರುತ್ತದೆ ಎಂದು ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ‌ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯ ಕುಟುಂಬದಿಂದ ಬಂದ ಮಹರ್ಷಿ ವಾಲ್ಮೀಕಿ ಅವರು ಬಹಳಷ್ಟು ಕಷ್ಟ ಕಾರ್ಪಣ್ಯದಿಂದ ಬೆಳೆದು 24 ಸಾವಿರ ಶ್ಲೋಕಗಳನ್ನು ರಾಮಾಯಣದಲ್ಲಿ ಬರೆದಿರುವುದು ಅವರ ಜ್ಞಾನದ ಪ್ರತೀಕವಾಗಿದೆ ಎಂದರು.

ಉಪನ್ಯಾಸಕ ಈಶ ‌ಮಾತನಾಡಿ, ರಾಮಾಯಣದ ಕಥೆಗಳನ್ನು ಶಾಲಾ ಕಾಲೇಜುಗಳಲ್ಲಿ ಹೇಳುವಂತಾಗಬೇಕು. ವಾಲ್ಮೀಕಿ ರಾಮಾಯಣ ಎಲ್ಲೆಡೆ ಪಸರಿಸುವಂತಾಗಬೇಕು ಎಂದರು. ಕಾರ್ಯಕ್ರಮದ ಮೊದಲಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು.
ಉಪನ್ಯಾಸಕರಾದ ಸುನಿತಾ, ಕವಿತಾ ಭಕ್ತಾ, ಕವಿತಾ, ಸುಚಿತ್ರಾ, ಕನಕ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT