ಕುಶಾಲನಗರ: ಜಿಲ್ಲಾ ಎಸ್.ವೈ.ಎಸ್ ಭಾನುವಾರ ಪಟ್ಟಣದಲ್ಲಿ ಗ್ರಾಂಡ್ ಮಿಲಾದ್ ರ್ಯಾಲಿ ಹಾಗೂ ಮೌಲಿದ್ ಮಜ್ಲಿಸ್ ನಡೆಸಲಾಯಿತು.
ಜಿಲ್ಲಾ ಯುವ ಜನ ಸಂಘದ ವತಿಯಿಂದ ಸ್ನೇಹ, ಸಹೋದರತ್ವ, ಸಮತ್ವ ಹಾಗೂ ಸಹಿಷ್ಣುತೆ ಸಾರುವ ಬೃಹತ್ ಮಿಲಾದ್ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಟ್ಟಣದ ಬೈಚನಹಳ್ಳಿ ಬ್ಲೂಮೂನ್ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಮೆರವಣಿಗೆ ಬಿಎಂ ರಸ್ತೆಯಲ್ಲಿ ಸಾಗಿ ಕಾರ್ಯಪ್ಪ ವೃತ್ತದ ಮೂಲಕ ಕಾರು ನಿಲ್ದಾಣದಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಆಕರ್ಷಕ ಉಡುಗೆಗಳನ್ನು ತೊಟ್ಟ ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶಿಸಲಾಯಿತು. ಮೌಲಿದ್ ಮಜ್ಲಿಸ್ ನಂತರ ಕಾರ್ಯಕ್ರಮ ಆರಂಭಗೊಂಡಿತು. ಕೊಡಗು ಜಿಲ್ಲಾ ಕಾಝಿ ಅಬ್ದುಲ್ಲಾ ಫೈಜ಼ಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಪ ಕಾಝಿ ಶೇಕುನಾ ಅಬ್ದುಲ್ಲಾ ಫೈಝಿ ಹಾಗೂ ಎಸ್.ವೈ.ಎಸ್ ಸಂಘಟನೆಯ ಪದಾಧಿಕಾರಿಗಳು, ಪ್ರಮುಖರಾದ ಉಸ್ಮಾನ್ ಫೈಜ಼ಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.