ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಟ್ಲ್‌ ಫ್ಲವರ್‌ ಶಾಲೆಯಲ್ಲಿ ರಂಜಿಸಿದ ಪ್ರತಿಭೋತ್ಸವ

Last Updated 7 ಡಿಸೆಂಬರ್ 2019, 13:51 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಕನ್ನಿಕಾ ಬಡಾವಣೆಯ ಲಿಟ್ಲ್‌ ಫ್ಲವರ್‌ ವಿದ್ಯಾಸಂಸ್ಥೆಯಲ್ಲಿ ಶನಿವಾರ ಮಕ್ಕಳ ಪ್ರತಿಭೋತ್ಸವನಡೆಯಿತು. ಶಾಲಾ ವಿದ್ಯಾರ್ಥಿಗಳು ಗಾನ, ನೃತ್ಯ, ಛದ್ಮವೇಷ ಸ್ಪರ್ಧೆಯ ಮೂಲಕ ರಂಜಿಸಿದರು.

ಪ್ರತಿಬೋತ್ಸವಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ವಾದೋ ಅವರು ಚಾಲನೆ ನೀಡಿ ಮಾತನಾಡಿ, ಮಕ್ಕಳ ಮನಸ್ಥಿತಿಯ ಬಗ್ಗೆ ಶಿಕ್ಷಕರು ಅರಿತು, ಉತ್ತಮ ಪ್ರಜೆಯಾಗಿ ರೂಪಿಸಬೇಕು. ಶಾಲೆ ಆಡಳಿತ ಮಂಡಳಿ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ ಎಂದು ಶ್ಲಾಘಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಚೇತನ್‌ ಮಾತನಾಡಿ, ‘ಪೋಷಕರು, ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಪಠ್ಯ ಹಾಗೂ ಪಠ್ಯೆತರ ಚುಟುವಟಿಕೆಗಳಲ್ಲಿಯೂಹೆಚ್ಚು ಭಾಗವಹಿಸಬೇಕು’ ಎಂದು ಕರೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ ಮಾತನಾಡಿ, ಮಕ್ಕಳು ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಿಂದಲೇ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ ತೀರ್ಪುಗಾರರಾಗಿ ಅನಿತಾ ಪೂವಯ್ಯ, ರೇಣುಕಾ ಸುಧಾಕರ್‌, ಶಾಲಾ ಕಾರ್ಯದರ್ಶಿ ಪ್ರೀತು, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಉಮೇಶ್, ಸುಬ್ರಮಣಿ, ದರ್ಶನ್‌, ಗುಲಾಬಿ ಜನಾರ್ದನ್‌ ಹಾಜರಿದ್ದರು.

3ನೇ ತರಗತಿ ವಿದ್ಯಾರ್ಥಿನಿ ವಿನಿಷಾ ಮತ್ತು ತಂಡದವರು ಪ್ರಾರ್ಥಿಸಿದರು. ಶೋಭಾ ಸ್ವಾಗತಿಸಿ, ನಿರೂಪಿಸಿದರು. 6ನೇ ತರಗತಿ ಪ್ರತೀಕಾವಂದಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT