9 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

7
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‌ನಿಂದ ಕಾರ್ಯಕ್ರಮ

9 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

Published:
Updated:
Deccan Herald

ಮಡಿಕೇರಿ: ‘ಇಂದಿನ ಮಕ್ಕಳಿಗೆ ಗುರುವಿನಂತೆ ಗೂಗಲ್ ಇದ್ದು, ಕಂಪ್ಯೂಟರ್ ನೀಡುವ ಮಾಹಿತಿಯೇ ಸವ೯ಸ್ವದಂತಾಗಿದೆ. ಹೀಗಾಗಿ, ಶೈಕ್ಷಣಿಕ ಗುಣಮಟ್ಟ ಶಿಕ್ಷಕರ ಬೋಧನೆಗಿಂದ ಹೆಚ್ಚಾಗಿ ತಾಂತ್ರಿಕತೆಯನ್ನೇ ಅವಲಂಬಿಸುವ ಪರಿಸ್ಥಿತಿ ನಿಮಾ೯ಣವಾಗಿದೆ’ ಎಂದು ಜಿಲ್ಲಾ ಮಹಿಳಾ ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ವಿಷಾದಿಸಿದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ 9 ಶಿಕ್ಷಕರಿಗೆ ‘ನೇಷನ್‌ ಬಿಲ್ಡಸ್೯’ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

‘ವೈಜ್ಞಾನಿಕತೆಯ ಭರಾಟೆಯ ಆಧುನಿಕ ಚಿಂತನೆಯ ದಿನಗಳಲ್ಲಿ ಜೀವಿಸುತ್ತಿರುವ ಮಕ್ಕಳನ್ನು ನವ ನಾಗರಿಕತೆ, ನವತಂತ್ರಜ್ಞಾನಗಳು ಹೊಸದ್ದೊಂದು ಲೋಕಕ್ಕೆ ಕೊಂಡೊಯ್ಯುತ್ತಿವೆ. ಮಕ್ಕಳ ಹಿತಚಿಂತನೆಯ ಬಗ್ಗೆ ಯಾರಿಗೂ ಯೋಚಿಸಲೂ ಸಮಯವಿಲ್ಲ. ಮೊದಲೆಲ್ಲಾ ಜೀವಿಸುವುದಕ್ಕಾಗಿ ದುಡ್ಡು ಬೇಕಿತ್ತು. ಈಗಿನ ದಿನಗಳಲ್ಲಿ ದುಡ್ಡಿಗಾಗಿಯೇ ಜೀವನ ಎಂಬಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ಎಂ.ಕೆ. ರಮೇಶ್, ಜಯಲಕ್ಷ್ಮೀ ರಮೇಶ್, ಮಡಿಕೇರಿ ಸೇಂಟ್‌ ಜೋಸೆಫ್ ಕಾನ್ವೆಂಟ್ ಉಪನ್ಯಾಸಕಿ  ಕೆ. ಜಯಲಕ್ಷ್ಮೀ,  ಯೋಗಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಫೀಲ್ಡ್ ಮಾಷ೯ಲ್ ಕೆ.ಎಂ. ಕಾಯ೯ಪ್ಪ ಕಾಲೇಜಿನ ಬಿ. ರಾಘವ , ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ದಾಮೋಧರ್ ಗೌಡ,  ನಾಪೋಕ್ಲು ಶ್ರೀರಾಮಟ್ರಸ್ಟ್ ಶಿಕ್ಷಕಿ ಟಿ.ಆರ್. ಸುಬ್ಬಮ್ಮ,  ಕಡಗದಾಳು ಶಾಲಾ ಶಿಕ್ಷಕಿ ಎಚ್.ಎನ್. ಭಾರತಿ , ನಾಪೋಕ್ಲು ಶಾಲಾ ಶಿಕ್ಷಕಿ ಕೆ.ಬಿ. ಉಷಾರಾಣಿ ಅವರಿಗೆ ನ್ಯಾಷನ್ ಬಿಲ್ಡರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಯೋಗಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ‘ಚಾರಣ ಕೈಗೊಂಡಿದ್ದ ಹಲವಾರು ಬೆಟ್ಟಗುಡ್ಡಗಳು ಭೂಕುಸಿತಕ್ಕೊಳಗಾಗಿ ಸೌಂದಯ೯ವನ್ನೇ ಕಳೆದುಕೊಂಡಿದ್ದು,  ಪ್ರಕೃತ್ತಿ ಮುನಿದರೆ ಏನಾದೀತು ಎಂಬುದಕ್ಕೆ ಇದು ನಿದಶ೯ನ’ ಎಂದು ಎಚ್ಚರಿಸಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾಯ೯ದಶಿ೯ ಎಂ.ಯು. ಮಹೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !