ನಾಪೋಕ್ಲು: ‘ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಜೊತೆಗೆ ಜೀವನ ಕೌಶಲಗಳನ್ನು ಸಿಬಿಎಸ್‌ಸಿ ಶಾಲೆಗಳಲ್ಲಿ ಕಲಿಸಲಾಗುತ್ತದೆ’ ಎಂದು ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲೆಯ ಪ್ರಾಂಶುಪಾಲರಾದ ಪುಷ್ಪಾ ಹೇಳಿದರು.
ಬ್ರಹ್ಮಗಿರಿ ಸಹೋದಯದ ಕ್ಲಸ್ಟರ್ ವತಿಯಿಂದ ಅಂಕುರ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಕೇವಲ ಶಿಕ್ಷಣ ಕಲಿತರೆ ಸಾಲದು. ಬದುಕಿನಲ್ಲಿ ಯಶಸ್ವಿಯಾಗಬೇಕು. ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸುವಂತಾಗಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಶೈರ್ ಹೋಂ ಅಧ್ಯಕ್ಷೆ ಗೀತಾ ಚಂಗಪ್ಪ ವಹಿಸಿದ್ದರು. ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜಚರ್ಮಣ, ಕಾರ್ಯದರ್ಶಿ ಹಾಗೂ ಬ್ರಹ್ಮಗಿರಿ ಸಹೋದಯದ ಖಜಾಂಚಿ ರತ್ನ ಚರ್ಮಣ, ಎಸ್ಎಂಎಸ್ ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ, ಮಡಿಕೇರಿ ಎ.ಎಲ್.ಜಿ ಶಾಲೆಯ ಜಾಯ್ಸಿ, ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ, ಜ್ಞಾನಗಂಗಾ ಶಾಲೆಯ ಸುಲೋಚನಾ, ಅಂಕುರ್ ಪಬ್ಲಿಕ್ ಶಾಲೆಯ ನಿರ್ದೆಶಕಿ ಗೌರಮ್ಮ ಉಪಸ್ಥಿತರಿದ್ದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಾದ ಕೊಡಗು ವಿದ್ಯಾಲಯದ ರೇಖಾ ಕೆ, ಎಎಲ್‌ಜಿ ಕ್ರೆಸೆಂಟ್ ಶಾಲೆಯ ಜ್ಯೋತಿ ಕೆ.ಎಸ್, ಎಸ್.ಎಂ.ಎಸ್ ವಿದ್ಯಾಪೀಠದ ಶೀಲಾವತಿ ಸಿ.ಬಿ, ಜ್ಞಾನ ಗಂಗಾ ಶಾಲೆಯ ನಾಗರಾಜ್ ಕೆ.ಸಿ, ನ್ಯಾಷನಲ್ ಅಕಾಡೆಮಿಯ ರೇಖಾ ನಾಣಯ್ಯ, ಅಂಕುರ್ ಪಬ್ಲಿಕ್ ಶಾಲೆಯ ತಾರಾ ಕೆ.ಸಿ. ಇವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಬಳಿಕ ಕೊಡಗಿನ ಆರು ಸಿಬಿಎಸ್‌ಸಿ ಶಾಲೆಗಳ ಶಿಕ್ಷಕರಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಇದಕ್ಕೂ ಮೊದಲು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ಅತಿಥಿಗಳನ್ನು ವಿಶೇಷ ಬ್ಯಾಂಡ್ ಮೇಳದೊಂದಿಗೆ ಸಭೆಗೆ ಬರಮಾಡಿಕೊಳ್ಳಲಾಯಿತು.
ಬ್ರಹ್ಮಗಿರಿ ಸಹೋದಯದ ಕ್ಲಸ್ಟರ್ ವತಿಯಿಂದ ಅಂಕುರ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.