ವಿರಾಜಪೇಟೆ: ‘ಜಗತ್ತಿನ ಎಲ್ಲ ಧರ್ಮಗ್ರಂಥಗಳ ಶ್ರೇಷ್ಠ ಚಿಂತನೆಯ ಸಾರವನ್ನು ಭಾರತದ ಸಂವಿಧಾನ ಒಳಗೊಂಡಿದೆ’ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅಭಿಪ್ರಾಯಪಟ್ಟರು.

ಕೆ.ಎಂ.ಎ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪಟ್ಟಣದಲ್ಲಿನ ಸಂಸ್ಥೆಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಿದೆ. ಶ್ರೇಷ್ಠವಾದ ರಾಷ್ಟ್ರ ಗ್ರಂಥವಾಗಿರುವ ಭಾರತ ಸಂವಿಧಾನ ಜನರ ಹಕ್ಕುಗಳಿಗೆ ಮೂಲವಾಗಿದೆ. ಪ್ರಪಂಚದ ನಕ್ಷೆಯಲ್ಲಿ ಭಾರತ ತನ್ನದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಭದ್ರಬುನಾದಿಯನ್ನು ಕಲ್ಪಿಸಿದೆ’ ಎಂದರು.

‘ದೇಶದ ಸಂವಿಧಾನಕ್ಕೆ ವಿಶೇಷವಾದ ಘನತೆಯಿದೆ. ವಿಶ್ವದಲ್ಲೇ ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆಯಾಗಿರುವ ಅತಿ ದೊಡ್ಡ ಲಿಖಿತ ಸಂವಿಧಾನ ಎಂಬ ಹಿರಿಮೆಗೆ ಪಾತ್ರವಾಗಿದೆ. ವ್ಯಕ್ತಿಗೆ ಘನತೆಯಿಂದ ಬಾಳುವ ಅವಕಾಶವನ್ನು ಕಲ್ಪಿಸುವುದು ಹಾಗೂ ರಾಷ್ಟ್ರದ ಏಕತೆಯನ್ನು ಕಾಪಾಡುವುದೇ ಸಂವಿಧಾನದ ಅಂತಿಮ ಉದ್ದೇಶವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.

ಸಂಸ್ಥೆಯ ಆಡಳಿತ ಮಂಡಳಿ ಹಿರಿಯ ನಿರ್ದೇಶಕರಾದ ಪುದಿಯತ್ತಂಡ ಎಚ್. ಶಂಸುದ್ದೀನ್, ಪದಾಧಿಕಾರಿಗಳಾದ ಪೊಯಕೆರ ಎಸ್. ರಫೀಕ್, ಮಂಡೇಂಡ ಎ. ಮೊಯ್ದು, ಪುದಿಯಾಣೆರ ಎಂ. ಹನೀಫ್, ಕೆಂಗೋಟಂಡ ಎಸ್. ಸೂಫಿ, ಆಲೀರ ಎಚ್. ಅಬ್ದುಲ್ ಲತೀಫ್, ಕೆ.ಎಂ.ಎ. ಮಾಜಿ ನಿರ್ದೇಶಕರಾದ ಕುರಿಕಡೆ ಅಬ್ದುಲ್ ಸಮ್ಮದ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.