ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದಲ್ಲಿ ಯುವತಿಯ ಸರ ಕಳ್ಳತನಕ್ಕೆ ಮುಂದಾದ ಯುವಕರನ್ನು ಯುವತಿಯೇ ಥಳಿಸಿದ್ದಾಳೆ.
ಗ್ರಾಮದ ನಿವಾಸಿ ದೇಶಿಕಾ ಬುಧವಾರ ಮಧ್ಯಾಹ್ನ ಮನೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಯುವಕರಿಬ್ಬರು ಅಡ್ಡಗಟ್ಟಿ ಚಿನ್ನದ ಸರವನ್ನು ಎಳೆಯಲು ಮುಂದಾಗಿದ್ದಾರೆ. ಈ ವೇಳೆ ದೇಶಿಕಾ ಚಿನ್ನದ ಸರವನ್ನು ಹಿಡಿದಿದ್ದು, ಸರವನ್ನು ಬಿಡುವಂತೆ ಮಲಯಾಳಂ ಬಾಷೆಯಲ್ಲಿ ಮಾತನಾಡಿದ ಕಳ್ಳನ ಕೈ ಎಳೆದು ತಿರುಗಿಸಿದ್ದಾರೆ.
ಗಲಾಟೆ ಕೇಳಿದ ಸ್ಥಳೀಯರು ಓಡಿ ಬಂದಿದ್ದು, ಕಳ್ಳರು ಪರಾರಿಯಾಗಿದ್ದಾರೆ. ದೇಶಿಕಾ ಕಳೆದ ವರ್ಷ ಪದವಿ ಮುಗಿಸಿದ್ದು, ಕರಾಟೆ ಕಲಿತಿದ್ದಾಳೆ. ಯುವತಿಯ ಧೈರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.