ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ ಪತ್ತೆ

Last Updated 23 ಜುಲೈ 2020, 13:25 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಗುರುವಾರ 13 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ವಿರಾಜಪೇಟೆ ತಾಲೂಕಿನ ಹೈಸೊಡ್ಲೂರುವಿನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 50 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಪೋಸ್ಟಲ್ ಕ್ವಾರ್ಟಸ್‍ನ 49 ಮತ್ತು 21 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ವಿರಾಜಪೆಟೆ ತಾಲ್ಲೂಕಿನ ಜೋಡ್‍ಬತ್ತಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 23 ಮತ್ತು 20 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯ ಎಂ.ಜಿ. ನಗರದ ನಿವಾಸಿ 41 ವರ್ಷದ ಪುರುಷ ಮತ್ತು ಮಡಿಕೇರಿಯ ಮುನೀಶ್ವರ ದೇವಾಲಯದ ಸಮೀಪವಿರುವ ಸುದರ್ಶನ ಬಡಾವಣೆಯ 32 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.

ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ರಸ್ತೆಯ ರಾಘವೇಂದ್ರ ದೇವಾಲಯದ ಬಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆ ತಾಲ್ಲೂಕಿನ ಅಬೂರ್ ಕಟ್ಟೆ ನಿವಾಸಿ 69 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

ಬೆಂಗಳೂರಿನಿಂದ ಮರಳಿರುವ ಕುಶಾಲನಗರದ ಹೆಬ್ಬಾಲೆಯ ಬನಶಂಕರಿ ರಸ್ತೆಯ 31 ವರ್ಷದ ಪುರುಷನಿಗೆ ಮತ್ತು ವಿರಾಜಪೇಟೆ ತಾಲ್ಲೂಕಿನ ಕೊಡವ ಸಮಾಜ ಸಮೀಪದ ಅಪ್ಪಯ್ಯ ಸ್ವಾಮಿ ರಸ್ತೆಯ 75 ಮತ್ತು 23 ವರ್ಷದ ಮಹಿಳೆಯರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

ಎಂ.ಜಿ.ನಗರ ಪೊನ್ನಂಪೇಟೆ, ಮಡಿಕೇರಿಯ ಮುನೀಶ್ವರ ದೇವಸ್ಥಾನದ ಹತ್ತಿರ ಸುದರ್ಶನ್ ಬಡಾವಣೆ, ಅಂಚೆ ಕ್ವಾರ್ಟರ್ಸ್, ಮಡಿಕೇರಿ, ರಾಘವೇಂದ್ರ ದೇವಸ್ಥಾನದ ಹತ್ತಿರ, ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ರಸ್ತೆ, ಸೋಮವಾರಪೇಟೆಯ ಅಬೂರ್‍ಕಟ್ಟೆ ಮತ್ತು ಬನಶಂಕರಿ ದೇವಾಲಯ ರಸ್ತೆ, ಹೆಬ್ಬಾಲೆ ಕುಶಾಲನಗರ ಭಾಗದಲ್ಲಿ ಕಂಟೈನ್‍ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ.

21 ಕಂಟೈನ್‍ಮೆಂಟ್ ವಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಮಡಿಕೇರಿ ಬಾವಲಿ, ಚೇರಂಬಾಣೆ, ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆ, ಬೊಳ್ಳೂರು, ಗೋಣಿಕೊಪ್ಪಲು ಮೋರ್ ಸ್ಟೋರ್ ಎದುರು ಪ್ರದೇಶ, ಹೆಬ್ಬಾಲೆ ಮುಖ್ಯರಸ್ತೆ ಪ್ರದೇಶ, ಕೈಕಾಡು ಪಾರಣೆ, ಕಿರಾಂದಾಡು ಪಾರಣೆ, ಕೊಟ್ಟಲು ಸಂಪಾಜೆ, ಕೊಟ್ಟೂರು, ಕುದುರೆಪಾಯ, ಮಣಜೂರು, ಸೋಮವಾರಪೇಟೆ, ಮರಪಾಲ, ತಿತಿಮತಿ, ನಂಜರಾಯಪಟ್ಟಣ, ಬೆಳ್ಳಿ ಕಾಲೊನಿ, ನಂಜರಾಯಪಟ್ಟಣ ಪೈಸಾರಿ, ಪೆರಾಜೆ, ಮಡಿಕೇರಿ, ಸಂಪಾಜೆ ಆರೋಗ್ಯ ವಸತಿ ಗೃಹ, ಸಣ್ಣ ಪಿಲಿಕೋಟು ಮಡಿಕೇರಿ, ತಲಕಾವೇರಿ, ತಾಮರ ಕಕ್ಕಬ್ಬೆ ಮತ್ತು ತಣ್ಣಿಮನಿ.

ಕೊರೊನಾ ಗೆದ್ದ ಪೊಲೀಸ್‌ಗೆ ಅಭಿನಂದನೆ:ಮಡಿಕೇರಿಯ ಡಿಎಆರ್ ಪೊಲೀಸ್ ಲೋಕೇಶ್ ಅವರಿಗೆ ಜುಲೈ 11ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಅವರಿಗೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಗುಣಮುಖರಾಗಿ ಬಂದ ಲೋಕೇಶ್ ಅವರನ್ನು ಡಿಎಆರ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುವಾರ ಆತ್ಮೀಯವಾಗಿ ಸ್ವಾಗತಿಸಿದರು. ಶಾಲು ಹೊದಿಸಿ, ಹೂವು ನೀಡಿ ಬಳಿಕ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಆತ್ಮೀಯವಾಗಿ ಸ್ವಾಗತಿಸಿದ್ದನ್ನು ಕಂಡು ಲೋಕೇಶ್ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT