ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೆಳಿಗ್ಗೆ 11ಕ್ಕೆ ಪಿಯು ಫಲಿತಾಂಶ

ಕಾತರದಿಂದ ಕಾಯುತ್ತಿದ್ದಾರೆ 6.90 ಲಕ್ಷ ವಿದ್ಯಾರ್ಥಿಗಳು
Last Updated 29 ಏಪ್ರಿಲ್ 2018, 9:36 IST
ಅಕ್ಷರ ಗಾತ್ರ

ಬೆಂಗಳೂರು: ರಜೆಯ ಮೋಜಿನಲ್ಲಿ ತೇಲಾಡುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ತಾವು ಬರೆದ ಪರೀಕ್ಷೆ ಫಲಿತಾಂಶದ ಸಮಯ ಹತ್ತಿರ ಬಂದಿದೆ. ಸೋಮವಾರ (ಏ.30) ಬೆಳಿಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

‘ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಫಲಿತಾಂಶವನ್ನು ವೆಬ್‌ಸೈಟ್‌ಗಳಲ್ಲಿ ನೋಡಬಹುದು. ಮೇ 1ರಂದು ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ’ ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ಫಲಿತಾಂಶವನ್ನು kar.nic.in , karresults.nic.in ಮತ್ತು pue.kar.nic.in ವೆಬ್‌ಸೈಟ್‌ಗಳ ಮೂಲಕ ಪಡೆದುಕೊಳ್ಳಬಹುದು.

ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ನೋಡುವುದು ಹೇಗೆ

1) http://karresults.nic.in ವೆಬ್‌ಸೈಟ್‌ಗೆ ಭೇಟಿನೀಡಿ

2) ನೋಂದಣಿ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿ ನೀಡಿ

3) Submit ಬಟನ್ ಕ್ಲಿಕ್ ಮಾಡಿ

4) ಫಲಿತಾಂಶದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಬಹುದು

ಎಸ್‌ಎಂಎಸ್ ಮೂಲಕ ಫಲಿತಾಂಶ

ನಿಮ್ಮ ಮೊಬೈಲ್‌ನಲ್ಲಿ KAR12 ಎಂದು ಟೈಪ್ ಮಾಡಿ, ಸ್ಪೇಸ್ ಕೊಟ್ಟು ನಿಮ್ಮ ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ. 56263ಗೆ ಎಸ್‌ಎಂಎಸ್ ಮಾಡಿ. ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಪಡೆದುಕೊಳ್ಳಿ.

6.90 ಲಕ್ಷ ವಿದ್ಯಾರ್ಥಿಗಳು

ಮಾರ್ಚ್ 1ರಿಂದ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಒಟ್ಟು 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 3,37,860 ಮಂದಿ ವಿದ್ಯಾರ್ಥಿನಿಯರು ಮತ್ತು 3,52,292 ವಿದ್ಯಾರ್ಥಿಗಳು. ಒಟ್ಟು 23 ವಿಷಯಗಳು, 11 ಭಾಷೆಗಳು ಮತ್ತು 50 ಕಾಂಬಿನೇಷನ್‌ಗಳು ಪಿಯುಸಿಯಲ್ಲಿ ಲಭ್ಯ. ರಾಜ್ಯದಲ್ಲಿ ಒಟ್ಟು 4725 ಪಿಯು ಕಾಲೇಜುಗಳು ಇವೆ.

ಕಳೆದ ವರ್ಷ ಉಡುಪಿ ಶೈಕ್ಷಣಿಕ ಜಿಲ್ಲೆಯು ಶೇ.90 ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳು ನಂತರದ ಸ್ಥಾನದಲ್ಲಿದ್ದವು. ಬೀದರ್ ಜಿಲ್ಲೆಯು ಶೇ.42.05 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿತ್ತು. 132 ಕಾಲೇಜುಗಳು ಶೂನ್ಯ ಸಂಪಾದಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT