ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಂಪೇಟೆ: ವ್ಯಾಘ್ರನ ದಾಳಿಗೆ ಯುವಕ ಬಲಿ, ದಕ್ಷಿಣ ಕೊಡಗಿನಲ್ಲಿ ಹೆಚ್ಚಿದ ಆತಂಕ

Last Updated 20 ಫೆಬ್ರುವರಿ 2021, 15:45 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು ಜಿಲ್ಲೆ): ಸಮೀಪದ ಕುಮಟೂರು ಗ್ರಾಮದಲ್ಲಿ ಶನಿವಾರ ರಾತ್ರಿ ಹುಲಿ ದಾಳಿಗೆ ಯುವಕ ಬಲಿಯಾಗಿದ್ದಾರೆ.

ಗ್ರಾಮದ ಪಣಿ ಯರವರ ಅಯ್ಯಪ್ಪ (16) ವ್ಯಾಘ್ರನ ದಾಳಿಗೆ ಬಲಿಯಾದವರು.
ಕುಮಟೂರು ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್‌ಮನೆಯಲ್ಲಿ ತಂದೆ ಪಣಿ ಯರವರ ಬಸವ ಅವರು ಜೊತೆಗೆ ಅಯ್ಯಪ್ಪ ಅವರು ವಾಸವಿದ್ದರು. ಕೆಲಸ ಮುಗಿಸಿ ಕಾಫಿ ತೋಟದಲ್ಲಿ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಕೊಟ್ರಂಗಡ ಅಶ್ವಥ್‌ ಅವರ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ. ಅಯ್ಯಪ್ಪ ಅವರ ತಲೆಯ ಭಾಗಕ್ಕೆ ಗಾಯವಾಗಿದೆ. ಹುಲಿ ಕೂದಲು ಮೃತದೇಹದಲ್ಲಿ ಮೇಲೆ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಕಳೆದ ಐದು ತಿಂಗಳಿಂದ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಹುಲಿ, ಈಗ ಮಾನವರ ಮೇಲೂ ದಾಳಿ ನಡೆಸುತ್ತಿದ್ದು ಈ ಭಾಗದ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT