ಗೋಣಿಕೊಪ್ಪಲು: ನಾಗರಹೊಳೆ ಅರಣ್ಯದಂಚಿನ ಕಾಫಿ ತೋಟದ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ನಾಲ್ಕೇರಿ ಕುಟ್ಟ ನಡುವಿನ ಕಾಫಿ ತೋಟದಿಂದ ಹೊರಬಂದ ಹುಲಿ ರಸ್ತೆಯಲ್ಲಿ ನಿಧಾನವಾಗಿ ಚಲಿಸಿ ಮತ್ತೊಂದು ಕಾಫಿ ತೋಟದಲ್ಲಿ ಮರೆಯಾಗಿದೆ. ಇದನ್ನು ಕಂಡ ನಾಗರಿಕರು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಜನತೆಯಲ್ಲಿ ಮನೆ ಮಾಡಿರುವ ಆತಂಕವನ್ನು ಅರಣ್ಯಾಧಿಕಾರಿಗಳು ದೂರಮಾಡಬೇಕು ಎಂದು ಆಗ್ರಹಿಸಿದ್ದಾರೆ