ನಾಳೆ ಸಾರ್ವತ್ರಿಕ ಕಕ್ಕಡ ನಮ್ಮೆ

7

ನಾಳೆ ಸಾರ್ವತ್ರಿಕ ಕಕ್ಕಡ ನಮ್ಮೆ

Published:
Updated:

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 23ನೇ ವರ್ಷದ ಸಾರ್ವತ್ರಿಕ ಕಕ್ಕಡ ನಮ್ಮೆಯನ್ನು ಆ.3ರಂದು ನಗರದ ಹೊರವಲಯದ ಕ್ಯಾಪಿಟಲ್ ವಿಲೇಜಿನಲ್ಲಿ ನಡೆಸಲಾಗುವುದು ಎಂದು ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊಡವ ಕುಲದ ಸಾಂಪ್ರದಾಯಿಕ ಪರಂಪರೆಯ ಪ್ರತೀಕವಾಗಿರುವ ಕಕ್ಕಡ ಪದ್‌ನೆಟ್ಟ್ ನಮ್ಮೆಯನ್ನು ಪ್ರತೀ ವರ್ಷದಂತೆ ಈ ಬಾರಿಯು ಸಕಲ ಸಾಂಸ್ಕೃತಿಕ ವಿಧಾನಗಳ ಮೂಲಕ ಆಚರಿಸಲಾಗುವುದು. ಕಕ್ಕಡ ನಮ್ಮೆಯನ್ನು ಕೃಷಿ ಮತ್ತು ಬುಡಕಟ್ಟು ಜನರಾದ ಕೊಡವರು ತಮ್ಮ ಕೃಷಿ ಚಟುವಟಿಕೆ ಆರಂಭದ ಸಂದರ್ಭ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಿ.ಎನ್.ಸಿ ಸಂಘಟನೆ, ಭತ್ತದ ಗದ್ದೆಯಲ್ಲಿ ನಾಟಿಯನ್ನು ನೆಡುವುದರ ಮೂಲಕ ಆಚರಿಸಲಿದೆ’ ಎಂದು ಹೇಳಿದರು.

ಅಂದು ಮದ್ದ್‌ಸೊಪ್ಪಿನಿಂದ ಮದ್ದ್ ಪಾಯಿಸವನ್ನೂ ತಯಾರಿಸಲಿದ್ದು, ಇದರಲ್ಲಿ 18 ಬಗೆಯ ವಿವಿಧ ಗಿಡಮೂಲಿಕೆಗಳ ಸತ್ವ ಕಕ್ಕಡ ಪದ್‌ನೆಟ್ಟ್ ದಿನದಂದು ಸೇರ್ಪಡೆಗೊಂಡು ಆರೋಗ್ಯ ಕಾಪಾಡುವಲ್ಲಿ ದೊಡ್ಡ ಕಾಣಿಕೆ ನೀಡುತ್ತದೆ. ಜತೆಗೆ, ವ್ಯಕ್ತಿ ವ್ಯಕ್ತಿಗಳ ಸಂಬಂಧ ವೃದ್ಧಿಗೂ ದಾರಿದೀಪವಾಗಲಿದೆ ಎಂದು ವಿವರಿಸಿದರು.

‘ಈ ಕಾರ್ಯಕ್ರಮವೂ ಜೀವನದಿ ತಾಯಿ ಕಾವೇರಿಗೂ ಮತ್ತು ಭೂತಾಯಿಗೂ, ಕೊಡವ ಬುಡಕಟ್ಟು ಜಗತ್ತಿಗೂ ಇರುವ ಅವಿನಾಭಾವ ಸಂಬಂಧವನ್ನು ದೃಢೀಕರಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡವರ ಉನ್ನತ ಸಂಸ್ಕೃತಿ ಹಾಗೂ ಶ್ರೇಷ್ಠ ಪರಂಪರೆಯನ್ನು ಹಸ್ತಾಂತರಿಸುವ ಕಾರ್ಯವಾಗಿದೆ’ ಎಂದು ನಾಚಪ್ಪ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !