ಶಸ್ತ್ರಚಿಕಿತ್ಸಾ ಉಪಕರಣ ಹಸ್ತಾಂತರ

7

ಶಸ್ತ್ರಚಿಕಿತ್ಸಾ ಉಪಕರಣ ಹಸ್ತಾಂತರ

Published:
Updated:
Deccan Herald

ಮಡಿಕೇರಿ: ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ನೀಡಿದ್ದು, ಉಪಕರಣಗಳ ಹಸ್ತಾಂತರಿಸುವ ಸಮಾರಂಭವು ಶುಕ್ರವಾರ ಆಸ್ಪತ್ರೆಯಲ್ಲಿ ನಡೆಯಿತು.

ರೋಟರಿ ವಿಶ್ವ ಅನುದಾನ ಯೋಜನೆ ಅಡಿ ಲಭ್ಯವಾಗಿರುವ ₹ 63.96 ಲಕ್ಷ ವೆಚ್ಚದ ನೂತನ ಶಸ್ತ್ರಚಿಕಿತ್ಸೆ ಪರಿಕರಗಳನ್ನು ಗಣ್ಯರು ಹಸ್ತಾಂತರಿಸಿದರು.

ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್‌ ಮಾತನಾಡಿ, ಅಶ್ವಿನಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸಂಘ– ಸಂಸ್ಥೆಗಳು ಮುಂದಾಗಬೇಕು. ಆಸ್ಪತ್ರೆಯ ಬೇಡಿಕೆಯಂತೆ ಸುಸಜ್ಜಿತ ಹಾಗೂ ವಿಶ್ವದರ್ಜೆ ಗುಣಮಟ್ಟದ ಶಸ್ತ್ರಚಿಕಿತ್ಸೆ ಪರಿಕರಗಳನ್ನು ಸಂಸ್ಥೆ ನೀಡಿರುವುದು ತೃಪ್ತಿ ತಂದಿದೆ. ಈ ಸೌಲಭ್ಯವನ್ನು ಪ್ರತಿಯೊಬ್ಬ ರೋಗಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಕೊಡಗಿನ ಬಲ್ಲಚಂಡ ಅಪ್ಪಯ್ಯ ಅವರು ಅಮೆರಿಕದ 22 ಕ್ಲಬ್‌ಗಳು ಸೇರಿದಂತೆ ವಿವಿಧೆಡೆಯಿಂದ ನಿಧಿ ಸಂಗ್ರಹಿಸಿ ಕುಶಾಲನಗರ ಕ್ಲಬ್‌ಗೆ ನೀಡಿದ್ದಾರೆ. ಈ ಬೃಹತ್‌ಮಟ್ಟದ ಹಣವನ್ನು ಅಶ್ವಿನಿ ಆಸ್ಪತ್ರೆಗೆ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು.

ನಿಕಟಪೂರ್ವ ಗವರ್ನರ್ ಸುರೇಶ್ ಚಂಗಪ್ಪ ಮಾತನಾಡಿ, ರೋಟರಿ ಸಂಸ್ಥೆ ಜಿಲ್ಲೆಯಲ್ಲಿ ಬೆಳೆಯುತ್ತಿದೆ, ಸಂಸ್ಥೆ ನೀಡುತ್ತಿರುವ ದನ ಸಹಾಯಗಳು ಉತ್ತಮ ಉದ್ದೇಶಗಳಿಗೆ ಬಳಕೆಯಾಗಬೇಕು ಎಂದು ಹೇಳಿದರು.

ಆಸ್ಪತ್ರೆಯ ಟ್ರಸ್ಟಿ ಕೆ.ಎಸ್. ದೇವಯ್ಯ ಮಾತನಾಡಿದರು. ಡಾ.ನಾಗಾರ್ಜುನ, ಕುಶಾಲನಗರ ರೋಟರಿ ಅಧ್ಯಕ್ಷ ಕೆ.ಎಂ.ಜೇಕಬ್‌, ಪಿಎಚ್‌ಎಫ್ ಧರ್ಮಾಪುರ ನಾರಾಯಣ್, ಬಿ.ಪ್ರೇಮ್ ಚಂದ್ರನ್, ರಿಚರ್ಡ್ ಡಿಸೋಜ, ಜಿ. ರಾಜೇಂದ್ರ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !