3 ದಿನ ನಡೆಯಲಿರುವ ಕಾರ್ಯಕ್ರಮ
ಇಂದು ಮಧ್ಯಾಹ್ನ 3ಕ್ಕೆ ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್ ಅವರು ನೂತನ ಮಸೀದಿಯನ್ನು ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ಲಾ ಪೈಝಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಭಾಗವಹಿಸಲಿದ್ದಾರೆ. ಧರ್ಮಗುರು ಯಾಹ್ಯ ಬಾಖವಿ ಭಾಗವಹಿಸಲಿದ್ದಾರೆ. ಜ.5ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಧರ್ಮಗುರು ಝಯಾದ್ ದಾರಿಮಿ ಪ್ರಧಾನ ಭಾಷಣ ಮಾಡಲಿದ್ದು ರಾತ್ರಿ ಅನ್ವರ್ ಅಲಿ ಹುದವಿ ಅವರ ನೇತೃತ್ವದಲ್ಲಿ ಇಶ್ಕ್ ಮಜ್ಲೀಸ್ ಜರುಗಲಿದೆ. ಜ. 6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪಾಣಕ್ಕಾಡಿನ ಸೈಯದ್ ಮೊಯೀನ್ ಅಲಿ ಶಿಹಾಬ್ ತಂಗಳ್ ಸಿರಾಜುದ್ದೀನ್ ಖಾಸಿಮಿ ಪತ್ತಾನಾಪುರಂ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಡಿ.ಎಚ್.ಸೂಫಿ ಗೋಣಿಕೊಪ್ಪಲು ಜುಮಾ ಮಸೀದಿಯ ಖತೀಬ ಮೊಹಮ್ಮದ್ ಆಲಿ ಫೈಝಿ ಎಸ್.ಕೆ.ಎಸ್.ಎಸ್.ಎಫ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿಯ ಅಧ್ಯಕ್ಷರು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪಿ.ಎ.ಅಸೀಸ್ ತಿಳಿಸಿದ್ದಾರೆ.