ಕತ್ತಲಿಂದ ಹೊರಬಂದ ಗ್ರಾಮಗಳು

7

ಕತ್ತಲಿಂದ ಹೊರಬಂದ ಗ್ರಾಮಗಳು

Published:
Updated:
Deccan Herald

ನಾಪೋಕ್ಲು: ಭೂಕುಸಿತದಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದ ವಿವಿಧ ಗ್ರಾಮಗಳಿಗೆ ಸಂಪರ್ಕ ಒದಗಿಸಲಾಯಿತು.

ವಿದ್ಯುತ್ ಪೂರೈಸುವ ಮುಖ್ಯಲೈನ್‌ನಲ್ಲಿಯೇ ಕಳೆದ ಕೆಲ ದಿನಗಳಿಂದ ಸಮಸ್ಯೆ ಇದ್ದುದರಿಂದ ಗ್ರಾಮೀಣ ಜನರು ಸಂಕಷ್ಟ ಅನುಭವಿಸಿದ್ದರು. ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ, ಕಗ್ಗೋಡ್ಲು ಗ್ರಾಮಗಳು ಹಲವು ದಿನಗಳು ಕತ್ತಲೆಯಲ್ಲಿ ಮುಳುಗಿದ್ದವು. ತೋಟ,ಗದ್ದೆಗಳ ಸಮೀಪದಲ್ಲಿ ಪುಟ್ಟಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದ ಹಲವು ರೈತರು ವಿದ್ಯುತ್ ಸರಬರಾಜು ಇಲ್ಲದೆ ತೊಂದರೆ ಅನುಭವಿಸಿದ್ದರು.

ಕಗ್ಗೋಡ್ಲು ಗ್ರಾಮದ ಹೂಕಾಡು ಪೈಸಾರಿ ನಿವಾಸಿಗಳೂ ಕತ್ತಲಲ್ಲಿ ದಿನಕಳೆದವರು. ಹಲವೆಡೆ ವಿದ್ಯುತ್ ತಂತಿಗಳು ಕಾಡು, ತೋಟಗಳ ಮೂಲಕ ಹಾದುಹೋಗಿದ್ದು, ಸಂಪರ್ಕ ಕಡಿತಗೊಂಡ ಸ್ಥಳಗಳನ್ನು ಪತ್ತೆ ಹಚ್ಚುವುದೇ ಸಮಸ್ಯೆಯಾಗಿ ಪರಿಣಮಿಸಿತ್ತು. ಸೆಸ್ಕ್ ಇಲಾಖೆಯ ಸಿಬ್ಬಂದಿ ಸಕಾಲಕ್ಕೆ ಸಿಗದೇ ಗ್ರಾಮಸ್ಥರು ಸಮಸ್ಯೆ ಅನುಭವಿಸಿದ್ದರು.

ಕೆಲವೆಡೆ ಗ್ರಾಮಸ್ಥರೇ ಒಗ್ಗೂಡಿ ವಿದ್ಯುತ್ ತಂತಿಗಳು ಹಾದುಹೋದ ಮಾರ್ಗದಲ್ಲಿನ ಕಾಡು, ಗಿಡಗಂಟಿಗಳನ್ನು ಕಡಿದು ವಿದ್ಯುತ್ ಲೈನ್ ಸರಿಪಡಿಸಿಕೊಂಡಿದ್ದರು. ‘ಮೇಕೇರಿ ಗ್ರಾಮದ ಕೆಲವು ಭಾಗಗಳಿಗೆ ಒಂದು ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇನ್ನೂ ವಿದ್ಯುತ್ ಲೈನ್ ದುರಸ್ತಿಯಾಗಿಲ್ಲ’ ಎಂದು ಗ್ರಾಮದ ಸುಬ್ರಮಣ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !