ವಿರಾಜಪೇಟೆ: ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಂದಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಪಟ್ಟಣದ ಗಾಂಧಿನಗರದಲ್ಲಿ ₹12 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿರಾಜಪೇಟೆ-ಮಡಿಕೇರಿ ರಸ್ತೆ ಭೇತ್ರಿ ಕುಡಿಯುವ ನೀರಿನ ಯೋಜನೆಗೆ ಕೊಳವೆ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಳಿಕ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗುವುದು. ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು ಕಾಮಗಾರಿಗಳು ಶೀಘ್ರವೇ ನಡೆಯಲಿವೆ. ಈ ವರ್ಷ ಭಾರಿ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ದುಸ್ಥಿತಿಯಲ್ಲಿದ್ದು, ಈಗಾಗಲೇ ಗ್ರಾಮೀಣ ಭಾಗದ ಕೆಲವು ರಸ್ತೆಗಳು ಕಾಂಕ್ರಿಟ್ ಹಾಗೂ ಇತರೆಡೆ ಡಾಂಬರಿಕರಣಗೊಂಡಿದೆ. ಪಟ್ಟಣದ ಮುಖ್ಯ ರಸ್ತೆಗೆ ₹5.60 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರ ಕಾಮಗಾರಿ ನಡೆಯಲಿದೆ. ರಸ್ತೆ ಅಗಲೀಕರಣ ಸಂದರ್ಭ ನಿವಾಸಿಗಳು ಸಾರ್ವಜನಿಕ ರಸ್ತೆಗೆ ಜಾಗ ಬಿಟ್ಟುಕೊಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾಂಕ್ರಿಟ್ ರಸ್ತೆ ಉದ್ಘಾಟನೆ ವೇಳೆ ಎ.ಎಸ್. ಪೊನ್ನಣ್ಣ ಅವರು ಗಾಂಧಿನಗರದಲ್ಲಿ ಕಾಂಕ್ರಿಟ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿದರು. ಪಟ್ಟಣದ ಕೀರ್ತಿ ಲೇಔಟ್ ಬಡಾವಣೆಯಲ್ಲಿ ₹10 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯನ್ನು ಅವರು ಇದೇ ವೇಳೆ ಉದ್ಘಾಟಿಸಿದರು.

ಈ ವೇಳೆ ಕೋಲತಂಡ ಬೋಪಯ್ಯ, ಪುರಸಭೆ ಮಾಜಿ ಸದಸ್ಯೆ ಜೂನಾ ಸುನಿತ, ಡಾ. ಶ್ರೀನಿವಾಸ್, ಶೋಭಾ, ಸ್ಥಳೀಯ ನಿವಾಸಿಗಳು ಇದ್ದರು. ಕೀರ್ತಿ ಲೇಔಟ್ ಬಡಾವಣೆಯಲ್ಲಿ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಸ್ಥಳಿಯ ನಿವಾಸಿಗಳಾದ ಮಿಟ್ಟು ಕಾವೇರಪ್ಪ, ಸಾಬು ಪೂವಯ್ಯ, ಪುಗ್ಗೇರ ಎಸ್.ನಂದ, ಸಿ.ಎನ್.ಗಂಗಾಧರ, ಪಿ.ಜಿ.ಸುಮೇಶ್, ಗುತ್ತಿಗೆದಾರ ಸ್ವಾಮಿ ಮತ್ತು ನವೀನ್, ಪಕ್ಷದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ಗುರುವಾರ ಮುಂಜಾನೆ ಶಾಸಕ ಪೊನ್ನಣ್ಣ ಅವರು ಅಧಿಕಾರಿಗಳೊಂದಿಗೆ ಪುರಸಭೆ ವ್ಯಾಪ್ತಿಯ ಕೆಲವು ಮುಖ್ಯ ರಸ್ತೆಗಳಿಗೆ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ವೀಕ್ಷಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ಎಂಜಿನಿಯರ್ ಎನ್.ಪಿ. ಹೇಮ್ ಕುಮಾರ್, ಸಹಾಯಕ ಮುರಳಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ನಗರ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮಾಜಿ ಸದಸ್ಯರಾದ ಡಿ.ಪಿ.ರಾಜೇಶ್, ಎಸ್.ಎಚ್.ಮತೀನ್, ಮಹ್ಮದ್ ರಾಫಿ, ಆತೀಫ್ ಮನ್ನ, ಬ್ಲಾಕ್ ಯುವ ಕಾಂಗ್ರೆಸ್ ಶಬೀರ್, ವಿ.ಕೆ.ಸತೀಶ್, ಎ.ವಿ.ಮಂಜುನಾಥ್, ಜೋಕಿಂ ರಾಡ್ರಿಗಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.