ವಿರಾಜಪೇಟೆ: ಪುರಭವನದಲ್ಲಿ ಗುರುವಾರ ನಡೆದ ಪುರಸಭೆಯ ವಾರ್ಷಿಕ ಹರಾಜಿನಲ್ಲಿ ಕಳೆದ ಸಾಲಿಗಿಂತ ₹18.82 ಲಕ್ಷ ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ ಕೆಲ ಮಳಿಗೆಗಳಿಗೆ ಮರು ಹರಾಜು ನಡೆಸಲು ನಿರ್ಧರಿಸಲಾಯಿತು.

ಗುರುವಾರ ವಾರ್ಷಿಕ ಹರಾಜಿನಲ್ಲಿ ಭಾಗವಹಿಸಿದ ಮಳಿಗೆಗಳ ಆಕಾಂಕ್ಷಿಗಳು ಹೆಚ್ಚಿನ ಆಸಕ್ತಿ ತೋರಲಿಲ್ಲ. ಕಳೆದ ಸಾಲಿನ ಹರಾಜಿನಲ್ಲಿ ಪುರಸಭೆಗೆ ₹ 38.34 ಲಕ್ಷ ಆದಾಯ ಬಂದಿದ್ದು, ಈ ಬಾರಿ ಪುರಸಭೆಗೆ ₹ 19.52 ಲಕ್ಷ ಮೊತ್ತ ಬಂದಿತ್ತು. ಕಡಿಮೆ ಆದಾಯ ಬಂದ ಹಿನ್ನೆಲೆಯಲ್ಲಿ 4 ಹಸಿಮೀನು ಮಳಿಗೆ, 5 ಕುರಿ ಮಾಂಸದ ಮಳಿಗೆ ಮತ್ತು 3 ಕೋಳಿ ಮಾಂಸದ ಮಳಿಗೆ ಮತ್ತು ವಾಹನ ಶುಲ್ಕ ಎತ್ತಾವಳಿ ಹರಾಜನ್ನು ಮತ್ತೆ ಕರೆಯಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.

ಸಭೆಯಲ್ಲಿ ಕೆಲ ವರ್ತಕರು ಮಾತನಾಡಿ, ಪಟ್ಟಣದ ಪಂಜರುಪೇಟೆಯಲ್ಲಿ ಮುಖ್ಯರಸ್ತೆಯಲ್ಲಿ ಅಂಗಡಿಗಳ ಮುಂಭಾಗ ವಾಹನ ನಿಲುಗಡೆ ಮಾಡುತ್ತಿರುವುದರಿಂದ ವರ್ತಕರು, ಸಾರ್ವಜನಿಕರು ಸೇರಿದಂತೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು ಪಾದಚಾರಿ ರಸ್ತೆ ಅಭಿವೃದ್ಧಿಗೆ ₹27 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಸಭೆಯ ಆರಂಭದಲ್ಲಿ ಪಟ್ರಪಂಡ ರಘು ನಾಣಯ್ಯ, ಪಿ.ಕೆ ಮಹ್ಮದ್ ಮಾತನಾಡಿದರು.

ಈ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಕಂದಾಯ ಅಧಿಕಾರಿ ವಿ.ಕೆ. ಸೋಮಶೇಖರ್, ಪರಿಸರ ಎಂಜಿನಿಯರ್ ರೀತು ಸಿಂಗ್, ಸಿಬ್ಬಂದಿ ಕೆ.ಎಂ. ಸುಲೇಖ, ಎಂ.ಯು. ರಜನಿ ಮತ್ತಿತರರು ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.