ವಿರಾಜಪೇಟೆ : ಪಟ್ಟಣದ ಪುರಭವನದಲ್ಲಿ ಮಂಗಳವಾರ ನಡೆದ ಪುರಸಭೆ ವಾರ್ಷಿಕ ಹರಾಜಿನಲ್ಲಿ ನಿರೀಕ್ಷಿತ ಆದಾಯ ದೊರೆಯದ ಹಿನ್ನೆಲೆಯಲ್ಲಿ ಕೆಲ ಮಳಿಗೆಗಳ ಹರಾಜು ಮತ್ತೆ ಮುಂದೂಡಲಾಯಿತು. ಮಾರ್ಚ್ 12 ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ನಿಗದಿತ ಆದಾಯ ದೊರೆಯದ ಹಿನ್ನೆಲೆಯಲ್ಲಿ ಇಂದು ಮರು ಹರಾಜು ನಡೆದ ಕುರಿಮಾಂಸದ ಐದು ಮಳಿಗೆಗಳ ಪೈಕಿ ಇಂದು ಹರಾಜಿನಲ್ಲಿ ಮೂರು ಮಳಿಗೆ ಮಾತ್ರ ಹರಾಜಾದರೂ, ಕಡಿಮೆ ಅದಾಯ ಬಂದಿದೆ. ಹಸಿ ಮೀನಿನ 4 ಮಳಿಗೆಗಳು ಮತ್ತು ಕೋಳಿ ಮಾಂಸದ ಮೂರು ಮಳಿಗೆ ಹಾಗೂ ಹಂದಿ ಮಾಂಸ ಮಳಿಗೆಗಳ ಮರು ಹರಾಜನ್ನು ಮಾ 24 ರಂದು ನಡೆಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಶುಲ್ಕ ಹರಾಜಿನ ವೇಳೆ ಬಿಡ್ಡುದಾರರು ನಿರಾಸಕ್ತಿ ತೋರಿದರು. ಈ ಹರಾಜಿನಲ್ಲಿ ಭಾಗವಹಿಸಿದ ಬಿಡ್ದಾರರಲ್ಲಿ ಕೆಲವರು ಮಾತನಾಡಿ, ಬದ್ರಿಯ ಜಂಕ್ಷನ್ ನಿಂದ ಸುಣ್ಣದ ಬೀದಿಗಾಗಿ ಗೋಣಿಕೊಪ್ಪಲು ರಸ್ತೆ ಜಂಕ್ಷನ್ವರೆಗಿನ ರಸ್ತೆಯಲ್ಲಿ ವಾಹನ ನಿಲುಗಡೆಗೆ ₹10 ಶುಲ್ಕ ವಸೂಲಾತಿ ಮಾಡುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರು ಶುಲ್ಕ ನೀಡದೆ ವಸೂಲಾತಿದಾರರ ವಿರುದ್ದ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ರಸ್ತೆಯಲ್ಲಿನ ಕೆಲವು ಅಂಗಡಿಗಳ ಮಾಲೀಕರು ಹಲವು ಕಡೆ ಬೆಳಗಿನಿಂದ ಸಂಜೆಯವರೆಗೆ ತಮ್ಮ ವಾಹನ ನಿಲ್ಲಿಸಿರುತ್ತಾರೆ. ಇದರಿಂದ ಆದಾಯ ಕಡಿಮೆಯಾಗುತ್ತಿದೆ. ಸುಣ್ಣದ ಬೀದಿ ಇಳಿಜಾರಿನ ರಸ್ತೆಯ ಒಂದು ಬದಿಯಲ್ಲಿ ನೀರಿನ ಕೊಳವೆಗೆ ಇಂಟರ್ ಲಾಕ್ ಅಗೆದು ತಿಂಗಳು ಕಳೆದರೂ ಇನ್ನೂ ದುರಸ್ಥಿ ಮಾಡಿಲ್ಲ. ಇದರಿಂದ ಇಲ್ಲಿ ನಿಲುಗಡೆ ಮಾಡಿದ ವಾಹನಗಳು ಹಳ್ಳದಿಂದ ಮೇಲೆ ಬಾರದಂತಾಗಿ ತೀರ ಸಮಸ್ಯೆಯಾಗುತ್ತಿದೆ. ಆದರಿಂದ ವಾಹನ ನಿಲುಗಡೆಯ ಈ ಹರಾಜು ಶುಲ್ಕ ವಸೂಲಾತಿ ಕೈ ಬಿಡಿ ಎಂದು ಆಗ್ರಹಿಸಿದರು. ಪುರಸಭೆ ಮುಖ್ಯಾಧಿಕಾರಿ ಪಟ್ಟಚರುವಂಡ ನಾಚಪ್ಪ ಮಾಧ್ಯಮದವರೊಂದಿಗೆ ಮಾತನಾಡಿ ವಾಹನ ಶುಲ್ಕದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಿಡ್ಡುದಾರರು ತಿಳಿಸಿದ್ದಾರೆ.

ಅವರ ಕೋರಿಕೆಯಾದ ವಾಹನ ನಿಲುಗಡೆ ಶುಲ್ಕ ವಸೂಲಾತಿ ಕೈ ಬಿಡುವ ವಿಚಾರವಾಗಿ ಮೇಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಇಂದಿನ ಮರು ಹರಾಜಿನಲ್ಲಿ ಮೂರು ಕುರಿ ಮಾಂಸ ಮಳಿಗೆ ಹರಾಜಾಗಿದ್ದು 2.25 ಲಕ್ಷ ರೂ ಆದಾಯ ಬಂದಿದ್ದು, ಆದಾಯ ಕಳೆದ ಸಾಲಿಗಿಂತ ಕಡಿಮೆಯಾಗಿದೆ. ಇನ್ನು ಎರಡು ಮಳಿಗೆ ಬಾಕಿ ಉಳಿದಿದೆ. ಇನ್ನು ಹಂದಿ ಮಾಂಸದ ಮಳಿಗೆಗೆ ಕಡಿಮೆ ಆದಾಯ ಬಂದ ಕಾರಣ ಹರಾಜು ಮುಂದೂಡಲಾಗಿದೆ. ಹಸಿ ಮೀನಿನ ನಾಲ್ಕು ಮಳಿಗೆ ಮತ್ತು ಮೂರು ಕೋಳಿಗಳ ಮಳಿಗೆಯನ್ನು ಮಾ 24 ರಂದು ಮರುಹರಾಜು ನಡೆಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.