ವಿರಾಜಪೇಟೆ: ಅರಸುನಗರದ ಮುತ್ತಪ್ಪ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ತೆರೆ ಮಹೋತ್ಸವ ಮಾರ್ಚ್ 26ರಿಂದ 29ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಮಾರ್ಚ್ 26ರಂದು ಬೆಳಿಗ್ಗೆ ದೇವಸ್ಥಾನದ ಕಳಸ ಪ್ರತಿಷ್ಠೆ ಹಾಗೂ ಪುನರ್ ಪ್ರತಿಷ್ಠಾಪನಾ ಪೂಜಾ ಕಾರ್ಯಗಳು ಕೇರಳದ ಪ್ರಸಿದ್ಧ ತಂತ್ರಿ ಬ್ರಹ್ಮಶ್ರೀ ಕುಮಾರ್ ಅವರಿಂದ ನಡೆಯಲಿದೆ. 27ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, ಕಳಸ ಪೂಜೆ, ನಂತರ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ್ ಮತ್ತು ಗುಳಿಗನ್ ದೇವರ ಪ್ರತಿಷ್ಠಾಪನೆ ನಡೆದು ಬಳಿಕ, ಕಳಶಾಭಿಷೇಕ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಮಾರ್ಚ್ 28ರಂದು ಧ್ವಜಾರೋಹಣ ನಡೆದು ನಂತರ ಮುತ್ತಪ್ಪನ ಮಲೆಯಿಳಿಸುವುದು ಮತ್ತು ವೆಳ್ಳಾಟಂ ಹಾಗೂ ಸಂಜೆ 6ಕ್ಕೆ ಕಳಸದೊಂದಿಗೆ ತಾಲಪೊಲಿ ಮೆರವಣಿಗೆಯ ನಡೆಯಲಿದೆ. ಮೆರವಣಿಗೆಯು ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನದಿಂದ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿಗಾಗಿ ಚರ್ಚ್ ರಸ್ತೆ ಮಾರ್ಗವಾಗಿ ಅರಸುನಗರ ಮುತ್ತಪ್ಪ ದೇವಸ್ಥಾನ ತಲುಪಲಿದೆ. ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಾರ್ಚ್ 29ರಂದು ಪ್ರಾತಃಕಾಲ ಸಿಡಿಮದ್ದು ಪ್ರದರ್ಶನ, ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ ನಡೆಯಲಿದೆ ಎಂದು ಮುತ್ತಪ್ಪ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-51-1036205944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.