ವಿರಾಜಪೇಟೆ: ಸಮೀಪದ ಬಿಟ್ಟಂಗಾಲ ಕಂಪನಿಮೊಟ್ಟೆ ಗ್ರಾಮದ ಪ್ರಾರ್ಥನಾ ಮಡಪುರ ಶ್ರೀ ಮುತ್ತಪ್ಪ ದೇವಾಲಯದ 34 ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಶ್ರದ್ದಾ ಭಕ್ತಿಯಿಂದ ಬುಧವಾರ ಮುಕ್ತಾಯಗೊಂಡಿತು.

ಮಾ. 31ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣ ಬಳಿಕ ಶ್ರೀ ಕಣ್ಣಂಬಾಡಿ ಅಮ್ಮನಿಗೆ ಪೂಜೆ ಸಲ್ಲಿಸಲಾಯಿತು. ರಾತ್ರಿ 8ಕ್ಕೆ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ತೊಟ್ಟಂ ತೆರೆ ನಡೆಯಿತು.

ಬಸುರಿಮಾಲ ದೇವರ ತೊಟ್ಟಂ ತೆರೆಯು ಮುಖ್ಯ ರಸ್ತೆಗಾಗಿ ದೇವಾಲಯಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಹಣತೆ ಹಿಡಿದು ಸಾಗಿದರು. ಬಳಿಕ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.

ಮಾ. 1ರಂದು ಮುಂಜಾನೆ ಗುಳಿಗನ್ ತೆರೆ, ಶ್ರೀ ಮುತ್ತಪ್ಪನ್, ಶ್ರೀ ತಿರುವಪ್ಪನ್ ತೆರೆ ಹಾಗೂ ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಮುಕ್ತಾಯಗೊಂಡಿತು.

ರಾತ್ರಿ ನಡೆದ ಸಿಡಿ ಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-51-1879934903

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.