ವಿರಾಜಪೇಟೆ: ಪಟ್ಟಣದ ನೆಹರು ನಗರದ ಶ್ರೀ ಪಲ್ಲಾಟ್ ಅಯ್ಯಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಶ್ರದ್ಧಾಭಕ್ತಿಯಿಂದ ಈಚೆಗೆ ನಡೆಯಿತು.

ಕಾರ್ಕಳದ ಶ್ರೀಕಾಂತ ತಂತ್ರಿಗಳ ಸಾರಥ್ಯದಲ್ಲಿ ನಡೆದ ಬ್ರಹ್ಮ ಕಲಶೋತ್ಸವದಲ್ಲಿ ಶ್ರೀ ಪಲ್ಲಾಟ್ ಅಯ್ಯಪ್ಪ, ವನದುರ್ಗಿ, ನಾಗದೇವತೆ ಮತ್ತು ಶ್ರೀ ಗಣಪತಿ ದೇವರನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಏಕಾದಶಿ ಮೂಲ ಮಂತ್ರ ಪಠಣ, ಕಲಶ ಮಂಟಪ ಸಂಸ್ಕಾರ, ಬಿಂಬ ಶುದ್ಧಿ, ಹೋಮ ಮತ್ತು ಪೂಜೆ ನಡೆಯಿತು.

ಅಯ್ಯಪ್ಪ ದೇವರ ಪತ್ರಿಷ್ಠೆ, ತತ್ವ ಹೋಮ, ಕಲಶಾಭಿಷೇಕ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ಬ್ರಹ್ಮ ಕಲಶಾಭಿಷೇಕ, ವ್ಯಾಸ ಪೂಜೆ ಮಂತ್ರಾಕ್ಷತೆ ಪೂಜೆ ನಡೆದು ಶ್ರೀ ಪಲ್ಲಾಟ್ ಅಯ್ಯಪ್ಪ ದೇವಾಲಯದ ಸಮ್ಮುಚ್ಚಯ ಲೋಕಾರ್ಪಣೆಗೊಂಡಿತು.

ಐದು ದಿನಗಳ ಕಾಲ ದೇವಾಲಯದ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ಕೈಗೊಳ್ಳಲಾಗಿತ್ತು. ಬ್ರಹ್ಮ ಕಲಶೋತ್ಸವ ಸಂದರ್ಭ ಶ್ರೀ ಪಲ್ಲಾಟ್ ಅಯ್ಯಪ್ಪ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-626324192

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.