ವಿರಾಜಪೇಟೆ: ಸಮೀಪದ ಅಮ್ಮತ್ತಿ ಹಾಗೂ ಕಾಕೋಟುಪರಂಬು ಹೋಬಳಿಯಲ್ಲಿ ನಿರಂತರವಾಗಿ ಕಾಡಾನೆ ಮತ್ತು ಇತರ ವನ್ಯಮೃಗಗಳ ಉಪಟಳದಿಂದಾಗಿ ರೈತರು ಕಂಗಾಲಾಗಿದ್ದು, ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಕರ್ನಾಟಕ ಕಾಫಿ ರೈತರ ಸಂಘದ ಜಿಲ್ಲಾ ಸಂಚಾಲಕ ಕೆ.ಎಚ್.ಹನೀಪ ಚಾಮಿಯಾಲ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಮಲ್ಲಂಬಟ್ಟಿ ಮೈತಾಡಿ, ಅರಮೇರಿ, ಹಾಲುಗುಂದ, ಬೆಳ್ಳರಿಮಾಡು, ಚೆಂಬೆಬೆಳ್ಳೂರು ದೇವಣಗೇರಿ, ಬಟ್ಟಮಕ್ಕಿ ಗ್ರಾಮಾಂತರ ಪ್ರದೇಶಗಳ ಕಾಫಿ ತೋಟಗಳಲ್ಲಿ ಕಾಡಾನೆಗಳ ಗುಂಪು ಬೀಡುಬಿಟ್ಟು ಬೆಳೆಗಳನ್ನು ಧ್ವಂಸ ಮಾಡುತ್ತಿದೆ. ಗ್ರಾಮಸ್ಥರು ರಾತ್ರಿ ವೇಳೆ ಹೊರಬರಲು ಆತಂಕಪಡುವಂತಾಗಿದೆ. ಜನರು ತಮ್ಮ ಕರ್ತವ್ಯಕ್ಕೆ ತೆರಳಲು ಹಿಂದೇಟು ಹಾಕುತಿದ್ದಾರೆ’ ಎಂದರು.

‘ಬೆಳೆ ಹಾನಿಯ ಕುರಿತು ಪರಿಹಾರಕ್ಕೆ ಇಲಾಖೆಗೆ ಅರ್ಜಿ ಸಲ್ಲಿಸಿದಲ್ಲಿ ವಿಳಂಬವಾಗಿ, ತೀರಾ ಕಡಿಮೆ ಪ್ರಮಾಣದ ಪರಿಹಾರ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಸದಸ್ಯ, ಕಾಫಿ ಬೆಳೆಗಾರ ಕೆ.ಎ.ಹಂಸ ಮೈತಾಡಿ ಅವರು ಮಾತನಾಡಿ, ‘ಅರಣ್ಯ ಇಲಾಖೆಯ ಕಾಡಾನೆ ಓಡಿಸುವ ಕಾರ್ಯಾಚರಣೆ ಎಂದರೆ, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸುವ ಕಾರ್ಯಾಚರಣೆ ಎಂಬಂತಾಗಿದೆ. ಕಾಡಾನೆಗಳ ವೈಜ್ಞಾನಿಕವಾಗಿ ಹಿಡಿದು ಅರಣ್ಯಕ್ಕೆ ಅಟ್ಟುವಂತಾಗಬೇಕು. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಬೇಕು’ ಎಂದರು.

ನೆಲ್ಲಿಹುದಿಕೇರಿಯ ಟಿ.ಟಿ.ಉದಯ ಕುಮಾರ್ ಅವರು ಮಾತನಾಡಿ, ‘ಅರಣ್ಯ ಇಲಾಖೆಯಾಗಲಿ, ಸರ್ಕಾರವಾಗಲಿ ಹಲವು ವರ್ಷಗಳಿಂದ ರೈತರು, ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಶಾಶ್ವತ ಪರಿಹಾರಕ್ಕೆ ಮುಂದಾಗದೇ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ’ ಎಂದು ದೂರಿಸದರು.

ನಾಗರಿಕ ಸಮಿತಿಯ ಸಂಚಾಲಕ ಇ.ಆರ್.ದುರ್ಗಾಪ್ರಸಾದ್ ಅವರು ಮಾತನಾಡಿ, ‘ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿರುವ ಕಾಡಾನೆ ಮತ್ತು ಇತರ ವನ್ಯಮೃಗಗಳ ಉಪಟಳವನ್ನು ಕೊನೆಗಾಣಿಸಲು ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-60401416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.