ಶುಕ್ರವಾರ, ಸೆಪ್ಟೆಂಬರ್ 24, 2021
26 °C

ವಿರಾಜಪೇಟೆ: ಕೋವಿಡ್‌ನಿಂದ ಮಹಿಳೆ ಸಾವು, ಪತ್ರಕರ್ತ ತಂಡದಿಂದ ಅಂತ್ಯ ಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಸಂಸ್ಕಾರವನ್ನು ಪತ್ರಕರ್ತರ ತಂಡವೊಂದು ನೆರವೇರಿಸಿ ಮಾನವೀಯತೆ ಮೆರೆದಿದೆ. ಇಲ್ಲಿನ ಪತ್ರಕರ್ತರು, ಮಾಧ್ಯಮ ಸ್ಪಂದನಾ ತಂಡದ ಮೂಲಕ ಸೇವಾ ಕಾರ್ಯ ಮಾಡಿದ್ದಾರೆ.

ಪಾಲಿಬೆಟ್ಟದ ಮಸ್ಕಲ್ ತೋಟದ ನಿವಾಸಿ, 49 ವರ್ಷದ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲು ಸಹಕರಿಸುವಂತೆ ಅವರ ಕುಟುಂಬಸ್ಥರು ಮಾಧ್ಯಮ ಪ್ರತಿನಿಧಿಗಳನ್ನು ಕೋರಿದ್ದರು. ಅದಕ್ಕೆ ಸ್ಪಂದಿಸಿದ ತಂಡದ ರಮೇಶ್ ಕುಟ್ಟಪ್ಪ, ಪುತ್ತಂ ಪ್ರದೀಪ್, ಪುತ್ತರಿರ ಪಪ್ಪು ತಿಮ್ಮಯ್ಯ, ಕುಟ್ಟಂಡ ಅಜಿತ್ ಕರುಂಬಯ್ಯ, ಎನ್.ವಿನಯ್, ಬಿ.ಪಿ.ಸುನಿಲ್ ಅವರು, ಪಿಪಿಇ ಕಿಟ್ ಧರಿಸಿ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಿದರು.

ಹಿಂದೆಯೂ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಬಲಮುರಿ ಸೇರಿ ವಿವಿಧೆಡೆ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು