ಮಡಿಕೇರಿ: ‘ನಾವು ಬಂದಿದ್ದೇವೆ. ಜನರು ಧೈರ್ಯವಾಗಿರಿ, ತುರ್ತು ಸ್ಥಿತಿಯಲ್ಲಿ ನಾವು ನಿಮ್ಮನ್ನು ರಕ್ಷಿಸುತ್ತೇವೆ’ ಎಂದು ಅಭಯ ನೀಡಿದವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಯೋಧರು.

ಬೆಂಗಳೂರಿನಿಂದ ಇಲ್ಲಿಗೆ ಭಾನುವಾರ ಬಂದಿರುವ ಇವರು ಕಳೆದೆರಡು ದಿನಗಳಿಂದ ಪರಿಸ್ಥಿತಿ ಪರಾಮರ್ಶಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ್ ಅವರು ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪ ಸಂಭವಿಸಬಹುದಾದ ಸ್ಥಳಗಳ ಮಾಹಿತಿ ನೀಡಿದ್ದಾರೆ. ಈಗ ಅವರು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿದ್ದಾರೆ.

ಇಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ಡಿಆರ್ಎಫ್ ತಂಡದ ಮುಖ್ಯಸ್ಥ ಇನ್ಸ್ಪೆಕ್ಟರ್ ಹರಿಶ್ಚಂದ್ರ ಪಾಂಡೆ, ‘ಮುಂಗಾರು ಬಹಳ ಮುಂಚಿತವಾಗಿಯೇ ಬಂದಿದೆ. ನಾವೂ ಸಹ ಮುಂಚಿತವಾಗಿಯೇ ಬಂದಿದ್ದೇವೆ. ಯಾವುದೇ ಆತಂಕ ಬೇಡ’ ಎಂದು ಹೇಳಿದರು.

ಭೂಕುಸಿತ, ಪ್ರವಾಹ ಸೇರಿದಂತೆ ಯಾವುದೇ ಬಗೆಯ ನೈಸರ್ಗಿಕ ವಿಕೋಪ ಸಂಭವಿಸಿದರೂ ಅದರಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ಬೇಕಾಗಿರುವ ರಕ್ಷಣಾ ಸಲಕರಣೆಗಳನ್ನು ತಂದಿದ್ದೇವೆ ಎಂದು ಅವುಗಳನ್ನು ಪ್ರದರ್ಶಿಸಿದರು.

‘ಈಗಾಗಲೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಜೊತೆ ಸಂಪರ್ಕ ಸಾಧಿಸಿದ್ದೇವೆ. ವಿಕೋಪ ಸಂಭವಿಸಬಹುದಾದ ಪ್ರದೇಶಗಳ ಮಾಹಿತಿ ಪಡೆದಿದ್ದೇವೆ. ಎಲ್ಲವನ್ನೂ ನಮಗೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಾಯ ಸಂಭವಿಸಿದ ಕೂಡಲೇ ನಾವು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ಆರಂಭಿಸುತ್ತೇವೆ’ ಎಂದು ಹೇಳಿದರು.

ಇವರ ನೇತೃತ್ವದಲ್ಲಿ ಒಟ್ಟು 30 ಜನರ ತಂಡ ಮೈತ್ರಿ ಹಾಲ್ನಲ್ಲಿ ಸನ್ನದ್ಧ ಸ್ಥಿತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.