ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಉಳಿವಿಗಾಗಿ ಗುಡ್ಡಗಾಡು ಓಟ

ಮಡಿಕೇರಿಯಲ್ಲಿ 65ನೇ ವನ್ಯಜೀವಿ ಸಪ್ತಾಹ: ಎಸ್‌ಪಿ, ಜಿಲ್ಲಾ ‍ಪಂಚಾಯಿತಿ ಸಿಇಒ ಭಾಗಿ
Last Updated 14 ಅಕ್ಟೋಬರ್ 2019, 11:21 IST
ಅಕ್ಷರ ಗಾತ್ರ

ಮಡಿಕೇರಿ:ಅರಣ್ಯ ಇಲಾಖೆ ವತಿಯಿಂದ ‘ನಮ್ಮ ನಡಿಗೆ ವನ್ಯ ಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಕೇಂದ್ರ ವಿಷಯದಡಿ65 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಭಾನುವಾರ ನಗರದ ಅರಣ್ಯ ಭವನದಲ್ಲಿ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಲಾಯಿತು.

ಅರಣ್ಯ ಇಲಾಖೆಯ ಪುಷ್ಪಗಿರಿ ವನ್ಯಜೀವಿ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೆಳಿಗ್ಗೆ 8 ರ ವೇಳೆಗೆ ಆರಂಭಗೊಂಡ ಗುಡ್ಡಗಾಡು ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಸುಮನ್ ಪನ್ನೇಕರ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಓಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರುವನ್ಯಜೀವಿ ಸಂರಕ್ಷಣೆ ಕುರಿತ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಮುಂದೆ ಸಾಗಿದರು.

ಅರಣ್ಯ ಭವನದಿಂದ ಕಾಫಿ ತೋಟಗಳ ಮಧ್ಯೆ ಇಬ್ನಿ ರೆಸಾರ್ಟ್ ಮೂಲಕ 10 ಕಿ.ಮೀ.ದೂರ ಕ್ರಮಿಸಿದ ಓಟಗಾರರು ಮರಳಿ ಅರಣ್ಯ ಭವನಕ್ಕೆ ತಲುಪಿದರು.

ಸುಮನ್ ಪನ್ನೇಕರ್ ಮಾತನಾಡಿ, ‘ಅರಣ್ಯ ಇಲಾಖೆಯಿಂದ ಇಂತಹ ಕಾರ್ಯಕ್ರಮದ ಏರ್ಪಡಿಸುವುದರಿಂದ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ. ಗುಡ್ಡಗಾಡು ಓಟದ ಸ್ಪರ್ಧೆಯು ಉತ್ತಮ ಆರೋಗ್ಯ ಹಾಗೂ ದೈಹಿಕ ದೃಢತೆಗೆ ಸಹಕಾರಿಯಾಗಿದೆ ಎಂದರು.

ಪ್ರತಿಯೊಬ್ಬರಲ್ಲೂ ವನ್ಯಜೀವಿಗಳ ಸಂಕರ‍್ಷಣೆ ಮತ್ತು ಪರಿಸರ ಕಾಳಜಿ ಬೆಳೆಸುವ ಕುರಿತು ಜನಜಾಗೃತಿ ಮೂಡಿಸಲು ಗುಡ್ಡಗಾಡು ಓಟ ಹಮ್ಮಿಕೊಳ್ಳಲಾಗಿದೆ ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಹೇಳಿದರು.

ಕೆ.ಲಕ್ಷ್ಮೀಪ್ರಿಯಾ ‘ ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದರು.

ಪರಿಸರ ಪ್ರತಿಜ್ಞೆ ವಿಧಿ ಬೋಧಿಸಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ‘ ಪ್ರತಿಯೊಬ್ಬರೂ ನೈಸರ್ಗಿಕ ಪರಿಸರಕ್ಕೆ ಯಾವುದೇ ಧಕ್ಕೆ ಮಾಡದೆ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಬೇಕು ಎಂದು ಕೋರಿದರು.

ಪುಷ್ಪಗಿರಿ ವನ್ಯಜೀವಿ ವಲಯದ ಆರ್.ಎಫ್.ಓ. ಶ್ರೀನಿವಾಸ ನಾಯಕ್, ವನ್ಯಜೀವಿ ಸಪ್ತಾಹದ ಅಗತ್ಯದಬಗ್ಗೆ ವಿವರಿಸಿದರು.
ಮಡಿಕೇರಿಯ ಕ್ಲಬ್ ಮಹೀಂದ್ರ ವತಿಯಿಂದ ಓಟದ ಸ್ಪರ್ದೆಯಲ್ಲಿ ಭಾಗವಹಿಸಿದವರಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರಣ್ಯ ಇಲಾಖೆ ವತಿಯಿಂದ ಸ್ಪರ್ಧಿಗಳಿಗೆ ವನ್ಯಜೀವಿ ಸಪ್ತಾಹ ಸಂದೇಶ ಸಾರುವ ಟೀ ಶರ್ಟ್‌ಗಳನ್ನು ವಿತರಿಸಲಾಯಿತು.

ಅರಣ್ಯ ಜಾಗೃತಿ ದಳೆದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ.ಕಾರ್ಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಿಲೇಶ್ ಸಿಂಧೆ, ಡಿ.ಎಸ್.ದಯಾನಂದ್, ಕೆ.ಎ.ನೆಹರು, ಪಿ.ಎ.ಸೀಮಾ, ಆರ್.ಎಫ್.ಓ.ಗಳಾದ ಶಮ, ಅನನ್ಯ ಕುಮಾರ್, ಕೆ.ಎಂ.ಮರಿ ಸ್ವಾಮಿ, ಕೊಟ್ರೇಶ್, ವೈ.ಕೆ.ಜಗದೀಶ್, ದೇವರಾಜ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಅನಿಲ್‌ ಕುಮಾರ್ ಕಾಪ್ಲೆ, ಮಡಿಕೇರಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉಮೇಶ್ ಬಾಬು, ಡಾ. ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT