ಸಿದ್ದಾಪುರ: ಕಾಡಾನೆ ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗದ ಮುಖ್ಯಸ್ಥರಾದ ಕುಮಾರ್ ಪುಷ್ಕರ್ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.

ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳ ಪಡುವ ಕರಡಿಗೋಡು ಅವರೆಗುಂದ, ಮತ್ತು ಮಾಲ್ದಾರೆ, ತಿತಿಮತಿ ಭಾಗಕ್ಕೆ ಭೇಟಿ ನೀಡಿ ಕಾಡಾನೆಗಳು ಸಂಚರಿಸುವ ಸ್ಥಳ, ತಿತಿಮತಿ ಭಾಗದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ನಿರ್ಮಾಣ ಮಾಡುತ್ತಿರುವ ಕಾಂಕ್ರೀಟ್ ಬ್ಯಾರಿಕೇಡ್ ವೀಕ್ಷಿಸಿದರು.

‘ ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಉಪಟಳ ಹೆಚ್ಚಾಗಿರುವ ಭಾಗದಲ್ಲಿ ಎ.ಐ. ಮಾದರಿಯ ಕ್ಯಾಮೆರಾ ಅಳವಡಿಸಲು ಹಾಗೂ ಕಾಡಾನೆಗಳು ನಿತ್ಯ ಸಂಚರಿಸುವ ಬಾಗದಲ್ಲಿ ಧ್ವನಿವರ್ಧಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಿಂದೆ ಕಾಡಾನೆಗಳಿಗೆ ರೇಡಿಯೊ ಕಾಲರ್ ಅನ್ನು ಆಫ್ರಿಕಾದಿಂದ ತರಲಾಗುತ್ತಿತ್ತು. ಇದೀಗ ಸ್ಥಳೀಯವಾಗಿ ರೇಡಿಯೊ ಕಾಲರ್ ಅಭಿವೃದ್ಧಿಪಡಿಸಿದ್ದು, ಜಿಲ್ಲೆಯಲ್ಲಿ ಹೆಚ್ಚು ಅಳವಡಿಸಲು ಸೂಚಿಸಿರು.

‘ಜಿಲ್ಲೆಯಲ್ಲಿ ವನ್ಯಪ್ರಾಣಿ ಹಾವಳಿ ತಡೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ವಾಹನಗಳನ್ನು ನೀಡಲಾಗುವುದು. ಜಿಲ್ಲೆಗೆ ಸರ್ಕಾರದ ಅನುದಾನ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದರು. ವನ್ಯ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಜನಜಾಗೃತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಕಾಡಾನೆಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ರೈತರ ಹೆಸರು ನೋಂದಣಿ ಮಾಡಿಕೊಂಡು ಅವರಿಗೆ ಅರಣ್ಯ ಇಲಾಖೆಯಿಂದ ಜಾಲತಾಣದ ಮೂಲಕ ಮಾಹಿತಿಗಳನ್ನು ರವಾನಿಸುವಂತೆ ಆನೆಗಳ ಚಲನವಲನವನ್ನು ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತರು ತಮ್ಮ ಭಾಗದ ವನ್ಯಪ್ರಾಣಿಗಳ ಹಾವಳಿಯ ಸಮಸ್ಯೆಯನ್ನು ಹಂಚಿಕೊಂಡರು.

ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವ್ರಷ್ಣಿ , ವಿರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಎ.ಸಿ.ಎಫ್ ಗಳಾದ ಗೋಪಾಲ್, ತಸಿಂ ಬಾನು, ವಲಯ ಅರಣ್ಯ ಅಧಿಕಾರಿಗಳಾದ, ಶಿವರಾಂ, ಗಂಗಾಧರ್, ಸಣ್ಣ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಸಿ.ಎ. ನಂದ ಸುಬ್ಬಯ್ಯ, ಖಾಸಗಿ ಸಂಸ್ಥೆಯ ಕಾಫಿತೋಟದ ವ್ಯವಸ್ಥಾಪಕರಾದ, ಪವನ್ ಮೊಣ್ಣಪ್ಪ, ಕಾರ್ತಿಕ್, ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.