ಬೈಕ್‌ನಲ್ಲಿ ಹಿಮಾಲಯದ ಕಾರ್‌ದುಂಗ್ಲ ಶ್ರೇಣಿ ಏರಿದ ಕೊಡಗಿನ ಯುವಕ

7
ನಿತ್ಯ 8ರಿಂದ 13 ಗಂಟೆ ಬೈಕ್‌ ಓಡಿಸಿದ ಸಾಹಸಿ

ಬೈಕ್‌ನಲ್ಲಿ ಹಿಮಾಲಯದ ಕಾರ್‌ದುಂಗ್ಲ ಶ್ರೇಣಿ ಏರಿದ ಕೊಡಗಿನ ಯುವಕ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯ ಕಂಡಂಗಾಲದ ಎ. ಯಶ್ವಂತ್‌ ಕಾಳಪ್ಪ ಅವರು ವಿಶಿಷ್ಟವಾದ ಸಾಧನೆ ಮಾಡಿದ್ದಾರೆ. ಬೈಕ್‌ನಲ್ಲೇ ಹಿಮಾಲಯ ಪರ್ವತ ಶ್ರೇಣಿಗೆ ತೆರಳಿ ಸಾಹಸ ಮೆರೆದಿದ್ದಾರೆ. ಟ್ರೈಂಪ್ ಮೋಟಾರ್ ಸೈಕಲ್ಸ್ ಕಂಪೆನಿ ಸಹಯೋಗದಲ್ಲಿ ಈ ಸಾಹಸ ಆಯೋಜಿಸಲಾಗಿತ್ತು. ದೇಶದ ವಿವಿಧ ರಾಜ್ಯದ 13 ಮಂದಿ ಪಾಲ್ಗೊಂಡಿದ್ದರು.

ಎಂ– 12 ಟ್ರೈಂಪ್ ಟೈಗರ್ ಬೈಕ್‌ ಹೊಂದಿರುವ ಯಶ್ವಂತ್ ಕಾಳಪ್ಪ, 13 ದಿನಗಳ ಕಾಲ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುತ್ತಾಡಿ 18,380 ಅಡಿ ಎತ್ತರದ ಕಾರ್‌ದುಂಗ್ಲ ಶ್ರೇಣಿ ಮುಟ್ಟಿ ಸಾಹಸ ಮೆರೆದಿದ್ದಾರೆ.

ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಹೊಸ ಬೈಕಿ ಖರೀದಿಸಿದ್ದರು. ವೈದ್ಯಕೀಯ ಕಿಟ್, ಬಟ್ಟೆ ಹಾಗೂ ಇಂಧನ ಸಂಗ್ರಹಣೆ ವ್ಯವಸ್ಥೆ ಮಾಡಿಕೊಂಡಿದ್ದರು. ಆಗಲೇ ಈ ಸಾಹಸ ಪ್ರದರ್ಶನದ ಆಲೋಚನೆ ಸಿದ್ಧಗೊಂಡಿತ್ತು. ಕಾಳಪ್ಪ ಅವರು ದಿನಕ್ಕೆ ಸುಮಾರು 8ರಿಂದ 13 ಗಂಟೆಗಳ ಕಾಲ ಬೈಕ್‌ ಓಡಿಸಿದ್ದಾರೆ.

ಸಣ್ಣಪಟ್ಟ ರಸ್ತೆಗಳು ಒಂದೆಡೆ. ಜತೆಗೆ, ತುಂಬಿ ಹರಿಯುವ ನದಿಗಳು, ಕಾರ್ಗತ್ತಲು. ಇವುಗಳನ್ನೆಲ್ಲಾ ಮೀರಿ ಬೈಕ್‌ನಲ್ಲೇ 2,800 ಕ್ರಮಿಸಿ ಈ ಸಾಹಸ ಮೆರೆದಿದ್ದಾರೆ.

ಗಡಿಗ್ರಾಮ ಚಿತ್ಕುಲ್ ತಲುಪಿ ವಾಪಸ್‌ ಆಗಿದ್ದಾರೆ. ಇವರೊಂದಿಗೆ ತೆರಳಿದ್ದ ಬೆಂಗಳೂರಿನ ಇಬ್ಬರು ವಾಪಸ್‌ ಆಗಿದ್ದರೆ ಕೊಡಗಿನ ಯುವಕ ಮಾತ್ರ ಪರ್ವತ ಶ್ರೇಣಿಯ ಕೊನೆಯ ಗ್ರಾಮದ ತನಕವೂ ಬೈಕ್‌ ರೈಡ್‌ ಮಾಡಿ ವಾಪಸ್‌ ಆಗಿದ್ದಾರೆ. ಅಲ್ಲದೇ ಯಶ್ವಂತ್‌ ಕಾಳಪ್ಪ ಕಾರ್ಗಿಲ್‌, ಶ್ರೀನಗರದಲ್ಲೂ ಸುತ್ತಾಡಿ ಹೊಸ ಅನುಭವ ಪಡೆದುಕೊಂಡಿದ್ದಾರೆ. ‘ಚಿಕ್ಕಂದಿನಿಂದಲೂ ಸಾಹಸ ಪ್ರವೃತ್ತಿ ನನ್ನದು. ತಂದೆ– ತಾಯಿ ಸಹ ಅದಕ್ಕೆ ಪ್ರೇರಣೆ ನೀಡಿದರು’ ಎಂದು ಯಶ್ವಂತ್‌ ನೆನಪಿಸಿಕೊಳ್ಳುತ್ತಾರೆ. ಮೊಬೈಲ್‌: 96327 22733 ಸಂಪರ್ಕಿಸಬಹುದು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !