ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರೊಂದಿಗೆ ಬಂದಿದ್ದ ಯುವಕರ ಮೇಲೆ ಹಲ್ಲೆ

Last Updated 17 ಆಗಸ್ಟ್ 2022, 13:48 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಪ್ರವಾಸಿತಾಣ ಮಾಂದಲ್‌ಪಟ್ಟಿಯಲ್ಲಿ ಇಬ್ಬರು ಯುವತಿಯರೊಂದಿಗೆ ಬಂದಿದ್ದ ಮೂವರು ಯುವಕರಿಗೆ ಮಂಗಳವಾರ ಸಂಜೆ ಗುಂಪೊಂದು ಹಲ್ಲೆ ನಡೆಸಿದೆ.

‘ನಂದಕಿಶನ್, ಸಮನ್‌ ಸಾಜಿದ್, ಸಂಶೀರ್‌ ಎಂಬ ಯುವಕರು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಡ್ಮಿಂಟನ್ ಕ್ಲಬ್‌ವೊಂದರ ಸದಸ್ಯರಾಗಿದ್ದು, ಅದೇ ಕ್ಲಬ್‌ನ ಇಬ್ಬರು ಸದಸ್ಯೆಯರೊಂದಿಗೆ ಇಲ್ಲಿ ಪ್ರವಾಸಕ್ಕಾಗಿ ಬಂದಿದ್ದರು. ಅಬ್ಬಿ ಫಾಲ್ಸ್‌ ವೀಕ್ಷಿಸಿ ಮಾಂದಲ್‌ ಪಟ್ಟಿಗೆ ತೆರಳಿದಾಗ ಮೊದಲಿಗೆ 5 ಜನರು ವಿನಾಕಾರಣ ಯುವಕರ ಮೇಲೆ ಹಲ್ಲೆ ನಡೆಸಿದರು. ನಂತರ, ಗುಂಪೊಂದು ಸುತ್ತುವರೆಯಿತು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಂತೆ ಎಲ್ಲರೂ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದವರ ಹುಡುಕಾಟ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT