ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿದೆ. ಬೇವು, ಬೆಲ್ಲ ಸವಿದು ಹೊಸ ವರ್ಷದ ಸ್ವಾಗತಕ್ಕೆ ಜನರು ಅಣಿಯಾಗಿದ್ದಾರೆ.

ನಗರದ ಅಲ್ಲಲ್ಲಿ ಬೇವಿನಸೊಪ್ಪಿನ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ಅಂಗಡಿಗಳಲ್ಲಿ ಬೆಲ್ಲದ ಖರೀದಿಯೂ ಇತ್ತು. ಹೂವಿನ ಬೆಲೆ ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೂಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.

ಯುಗಾದಿಯ ನಂತರ ಬರಲಿರುವ ರಾಮೋತ್ಸವಕ್ಕೆ ನಗರದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಇಂದಿನಿಂದಲೆ ರಾಮೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ.

ಮಡಿಕೇರಿಯಲ್ಲಿ 132ನೇ ವರ್ಷದ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾರ್ಚ್ 19ರಿಂದ 28ರವರೆಗೆ ಇಲ್ಲಿನ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಿತ್ಯ ಸಂಜೆ 6.30ರಿಂದ 8.30ರವರೆಗೆ ನಡೆಯಲಿವೆ.

19ರಂದು ಪುಂಜಾಲಕಟ್ಟೆ ಕೃಷ್ಣ ಗೋಪಾಲ್ ಹಾಗೂ ಬಳಗದಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, 20 ರಂದು ಮೈಸೂರಿನ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ಪೌರಾಣಿಕ ನಾಟಕಗಳ ರಂಗಗೀತೆ ಗಾಯನ, 21ರಂದು ಮಡಿಕೇರಿಯ ವಿದುಷಿ ಮೇಘಾ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, 22 ರಂದು ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯ ಪೂರ್ಣಿಮಾ ವಿನಯ್ ಶಿಷ್ಯಯರಿಂದ ನೃತ್ಯ ಸಂಗೀತ, 23 ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ, 24ರಂದು ಮಡಿಕೇರಿಯ ಶ್ರುತಿ ಲಯ ತಂಡ, ವೀಣಾ ಹೊಳ್ಳರಿಂದ ಭಕ್ತಿ ಸಂಗೀತ, 25ರಂದು ಬಾಳೆಲೆಯ ಕಾವೇರಿ ಕಲಾಸಮಿತಿ, ವತ್ಸಲಾ ನಾರಾಯಣ್ ಹಾಗೂ ಬಳಗದಿಂದ ಭಜನೆ, ಭಕ್ತಿ ಸಂಗೀತ, 26ರಂದು ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯ ಪ್ರೇಕ್ಷಾ ಭಟ್ ಹಾಗೂ ಶಿಷ್ಯರಿಂದ ಭರತನಾಟ್ಯ ನಡೆಯಲಿದೆ.

27ರಂದು ಶ್ರೀ ರಾಮನವಮಿ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಮಡಿಕೇರಿಯ ಶಿವಶಕ್ತಿ ವೃಂದದಿಂದ ಧಾರ್ಮಿಕ ಪಠಣ, ಸಂಜೆ ಮಂಗಳೂರಿನ ವಿದುಷಿ ಶ್ರೇಯಾ ಕೊಳತ್ತಾಯ, ಸುರತ್ಕಲ್ ಅವರಿಂದ ಕರ್ನಾಟಕ ಶಾಸ್ಟ್ರೀಯ ಸಂಗೀತ, 28 ರಂದು ಹನುಮಂತೋತ್ಸವ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಗಾನಾಮೃತ ಕಾರ್ಯಕ್ರಮ ಹಾಗೂ ಸಂಜೆ ಮಂಗಳೂರಿನ ಯಕ್ಷಮಂಜುಳಾ ಮಹಿಳಾ ಬಳಗ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಬಾಲ ಪ್ರತಿಭೆಗಳಿಂದ ತಾಳಮದ್ದಳೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ಮಡಿಕೇರಿ ಕೋದಂಡ ರಾಮ ದೇವಾಲಯದಲ್ಲಿ ರಾಮೋತ್ಸದ ಅಂಗವಾಗಿ ಬುಧವಾರ ಸಂಕಲ್ಪ ಪೂಜೆ ನಡೆಸಲಾಯಿತು.

ಸಮಿತಿಯ ಜಿ.ರಾಜೇಂದ್ರ, ಕೆ.ಎಂ.ಗಣೇಶ್, ಬೊಳ್ಳಜಿರ ಅಯ್ಯಪ್ಪ, ಅಂಬೇಕಲ್ ನವೀನ್ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ರಾಮೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ‘ಕೋದಂಡರಾಮ ದೇವಾಲಯದಲ್ಲಿ 37 ವರ್ಷಗಳಿಂದ ರಾಮನವಮಿ ನಡೆಯುತ್ತಿತ್ತು. ಕಳೆದ ವರ್ಷದಿಂದ ರಾಮೋತ್ಸವ ಆರಂಭಿಸಿದ್ದೇವೆ. ಈ ವರ್ಷವೂ ಮಾರ್ಚ್ 26 ಮತ್ತು 27ರಂದು ರಾಮೋತ್ಸವ ನಡೆಯಲಿದೆ. ಜಾತಿ, ಧರ್ಮದ ಭೇದ ಇಲ್ಲದೇ ನೆರವು ಹರಿದು ಬಂದಿದೆ. ಎಲ್ಲರೂ ಒಂದಾಗಿ ಈ ಉತ್ಸವ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.