ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ನಗರಸಭೆ: ಅಂತಿಮ ಕಣದಲ್ಲಿ 149 ಅಭ್ಯರ್ಥಿಗಳು

ಗೆಲುವಿಗೆ ಪಕ್ಷಗಳ ತಂತ್ರ– ಪ್ರತಿತಂತ್ರ
Last Updated 7 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ನಗರಸಭೆಯ 35 ವಾರ್ಡ್‌ಗೆ ನ.12ರಂದು ಚುನಾವಣೆ ನಡೆಯಲಿದ್ದು, 51 ಮಂದಿ ಪಕ್ಷೇತರರು ಸೇರಿದಂತೆ 149 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ತಲಾ 33 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯು ಕೇವಲ 20 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಮುಖ ಮೂರು ರಾಷ್ಟ್ರೀಯ ಪಕ್ಷಗಳು ಗೆಲುವಿಗೆ ತಂತ್ರ ಪ್ರತಿತಂತ್ರ ರೂಪಿಸುತ್ತಿವೆ.

ಉಳಿದಂತೆ ಸಿಪಿಎಂನಿಂದ 2, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) 5, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಪಕ್ಷದಿಂದ 4 ಹಾಗೂ ಸಂಯುಕ್ತ ಜನತಾದಳ  ಪಕ್ಷದಿಂದ (ಜೆಡಿಯು) ಒಬ್ಬ ಅಭ್ಯರ್ಥಿಯು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. 51 ಮಂದಿ ಪಕ್ಷೇತರ ಅಭ್ಯರ್ಥಿಗಳು ವಿವಿಧ ವಾರ್ಡ್‌ಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾಜಿ ಶಾಸಕ ವರ್ತೂರು ಪ್ರಕಾಶ್‌ರ ‘ನಮ್ಮ ಕಾಂಗ್ರೆಸ್‌’ ಪಕ್ಷದ ಅಭ್ಯರ್ಥಿಗಳು ಹಲವು ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿದ್ದಾರೆ.

ವಾರ್ಡ್‌ವಾರು ವಿವರ: ವಾರ್ಡ್ 1ರಲ್ಲಿ ಕಾಂಗ್ರೆಸ್‌ನಿಂದ ಬಿ.ಎ.ಕುಸುಮಾ ಕುಮಾರಿ, ಜೆಡಿಎಸ್‌ನಿಂದ ಆರ್. ಶ್ಚೇತಾ ಅಭ್ಯರ್ಥಿಗಳಾಗಿದ್ದಾರೆ. ವಾರ್ಡ್ 2ರಲ್ಲಿ ಎನ್.ಎಸ್.ಪ್ರವೀಣ್ (ಜೆಡಿಎಸ್), ಎಂ.ಎಸ್.ಬದ್ರಿನಾರಾಯಣ (ಬಿಜೆಪಿ), ರೌತ್ ಶಂಕರಪ್ಪ (ಕಾಂಗ್ರೆಸ್‌), ಪಿ.ವೆಂಕಟರವಣಪ್ಪ (ಸಿಪಿಎಂ), ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ.

ವಾರ್ಡ್ 3ರಲ್ಲಿ ಎಸ್.ಎನ್.ಗೀತಾರಾಣಿ (ಜೆಡಿಎಸ್), ನಾರಾಯಣಮ್ಮ (ಕಾಂಗ್ರೆಸ್‌), ಕೆ.ಉಷಾ (ಪಕ್ಷೇತರ), ವಾರ್ಡ್ 4ರಲ್ಲಿ ನಾಗೇಶ್ (ಜೆಡಿಎಸ್), ಶಿವಕುಮಾರ್ (ಬಿಜೆಪಿ), ಸಿ.ಸೋಮಶೇಖರ್ (ನಮ್ಮ ಕಾಂಗ್ರೆಸ್), ವಾರ್ಡ್ 5ರಲ್ಲಿ ಸಿ.ಭಾರತಿ (ಬಿಜೆಪಿ), ವಿ.ಎಂ.ವಿಜಯಲಕ್ಷ್ಮಿ (ಜೆಡಿಎಸ್), ಎಸ್.ವಿ.ಸೌಮ್ಯ (ಕಾಂಗ್ರೆಸ್‌) ಮತ್ತು 4 ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ವಾರ್ಡ್ 6ರಲ್ಲಿ ಬಿ.ಎಂ.ಮುಬಾರಕ್ (ಕಾಂಗ್ರೆಸ್‌) ಮತ್ತು ವಿ.ಮಂಜುನಾಥ್ (ಜೆಡಿಎಸ್), ವಾರ್ಡ್ 7ರಲ್ಲಿ ಜಿ.ಎನ್.ಜಯರಾಮ್‌ (ಕಾಂಗ್ರೆಸ್‌), ನಾರಾಯಣಸ್ವಾಮಿ (ಸಿಪಿಎಂ), ವಿ.ಕೆ.ರಾಜೇಶ್ (ಬಿಜೆಪಿ), ಎಂ.ಸುರೇಶ್‌ಬಾಬು (ಜೆಡಿಎಸ್), ಇಬ್ಬರು ಪಕ್ಷೇತರ ಅಭ್ಯರ್ಥಿಗಳು, ವಾರ್ಡ್ 8ರಲ್ಲಿ ಜಿ.ಎಸ್.ಪಾವನ (ಕಾಂಗ್ರೆಸ್‌) ಮತ್ತು ಎನ್.ಪಿ.ಸ್ವಾತಿ (ಜೆಡಿಎಸ್), ವಾರ್ಡ್ 9ರಲ್ಲಿ ಆರ್.ಎಸ್.ಚಂದ್ರಶೇಖರ್ (ಬಿಜೆಪಿ), ಎಸ್.ಕೆ.ಚಂದ್ರಶೇಖರ್ (ಜೆಡಿಎಸ್), ವಿ ಶ್ರೀನಿವಾಸ್ (ಕಾಂಗ್ರೆಸ್‌) ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು, ವಾರ್ಡ್ 10ರಲ್ಲಿ ಮಹಾಲಕ್ಷ್ಮಿ (ಕಾಂಗ್ರೆಸ್‌), ರಂಗಮ್ಮ (ಬಿಜೆಪಿ), ಬಿ.ಸುಚಿತ್ರಾ (ಜೆಡಿಎಸ್) ಸ್ಪರ್ಧಿಸಿದ್ದಾರೆ.

ವಾರ್ಡ್ 11ರಲ್ಲಿ ರಾಜೇಶ್‌ಬಾಬು (ಬಿಜೆಪಿ) ಮತ್ತು ವಿ.ಮಂಜುನಾಥ (ನಮ್ಮ ಕಾಂಗ್ರೆಸ್), ವಾರ್ಡ್ 12ರಲ್ಲಿ ವಿ.ಅಪ್ಪಯ್ಯಪ್ಪ (ಕಾಂಗ್ರೆಸ್‌), ಸಿ.ರಾಕೇಶ್ (ಜೆಡಿಎಸ್), ಬಿ.ಎನ್.ಶ್ರೀನಾಥ್‌ (ಬಿಜೆಪಿ) ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ, ವಾರ್ಡ್ 13ರಲ್ಲಿ ಎಚ್.ಗೋವಿಂದರಾಜು (ಬಿಜೆಪಿ), ಎಸ್.ಮಂಜುನಾಥ್ (ಕಾಂಗ್ರೆಸ್‌), ಕೆ.ಎಂ.ಮಂಜುನಾಥ (ಜೆಡಿಎಸ್), ವಾರ್ಡ್ 14ರಲ್ಲಿ ಎಸ್.ಆರ್. ಮುರಳಿಗೌಡ (ಬಿಜೆಪಿ), ಜಿ.ಶೋಭಾರಾಣಿ (ಕಾಂಗ್ರೆಸ್‌), ಎಲ್.ಹರೀಶ್ (ಜೆಡಿಎಸ್) ಮತ್ತು ಒಬ್ಬರು ಪಕ್ಷೇತರ ಅಭ್ಯರ್ಥಿ, ವಾರ್ಡ್ 15ರಲ್ಲಿ ಎಂ.ಕವಿತಾ (ಜೆಡಿಎಸ್), ವಿ.ಗಂಗಮ್ಮ (ಕಾಂಗ್ರೆಸ್‌), ಪೂರ್ಣಿಮ (ಬಿಜೆಪಿ), 5 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ವಾರ್ಡ್ 16ರಲ್ಲಿ ಎಂ.ಸಲಾವುದ್ದೀನ್ (ಕಾಂಗ್ರೆಸ್‌), ತನ್ವೀರ್ ಅಹಮ್ಮದ್ (ಬಿಜೆಪಿ), ಸೈಯದ್ ಇಸ್ಮಾಯಿಲ್ (ಜೆಡಿಎಸ್), 3 ಮಂದಿ ಪಕ್ಷೇತರರು, ವಾರ್ಡ್ 17ರಲ್ಲಿ ಸಮೀರಾ ಬಾಬು (ಕಾಂಗ್ರೆಸ್‌), ಹಸೀನಾ (ಜೆಡಿಎಸ್) ಮತ್ತು 3 ಮಂದಿ ಪಕ್ಷೇತರ ಅಭ್ಯರ್ಥಿಗಳು, ವಾರ್ಡ್ 18ರಲ್ಲಿ ಅಮೀರ್ ಖಾನ್ (ಜೆಡಿಎಸ್), ಸೌದ್ ಉಲ್ಲಾ ಷರೀಫ್ (ಕಾಂಗ್ರೆಸ್‌) ಮತ್ತು 4 ಮಂದಿ ಪಕ್ಷೇತರರು, ವಾರ್ಡ್ 19ರಲ್ಲಿ ಬಿ.ಅಸ್ಲಂ ಪಾಷಾ (ಕಾಂಗ್ರೆಸ್‌), ಟಿ.ಎಂ.ಷಂಷೀರ್ (ಜೆಡಿಎಸ್) ಹಾಗೂ 2 ಮಂದಿ ಪಕ್ಷೇತರ ಅಭ್ಯರ್ಥಿಗಳು, ವಾರ್ಡ್ 20ರಲ್ಲಿ ಎಂ.ದೇವಿಕಾ (ಜೆಡಿಎಸ್), ವಿ.ವೆಂಕಟಲಕ್ಷ್ಮಿ (ಕಾಂಗ್ರೆಸ್‌), ಸೌಭಾಗ್ಯ (ಬಿಜೆಪಿ) ಕಣದಲ್ಲಿದ್ದಾರೆ.

ವಾರ್ಡ್ 21ರಲ್ಲಿ ಅತಾವುಲ್ಲಾ ಖಾನ್ (ಕಾಂಗ್ರೆಸ್‌), ಡಿ.ಹರಿಕೃಷ್ಣ (ಬಿಜೆಪಿ), ಇದಾಯತ್ ಉಲ್ಲಾ (ಜೆಡಿಎಸ್) ಮತ್ತು ಮೂವರು ಪಕ್ಷೇತರರು, ವಾರ್ಡ್ 22ರಲ್ಲಿ ರೇಷ್ಮಾ (ಕಾಂಗ್ರೆಸ್‌) ಹಾಗೂ ಶಮಾತಾಜ್ (ಜೆಡಿಎಸ್), ವಾರ್ಡ್ 23ರಲ್ಲಿ ಅಜ್ರನ್‌ ಉನ್ಸಿನ್‌ (ಕಾಂಗ್ರೆಸ್), ಆಯೇಷಾ ಸುಲ್ತಾನಾ (ಜೆಡಿಎಸ್), ಜಬೀನಾ ತಾಜ್ (ಪಕ್ಷೇತರ), ವಾರ್ಡ್ 24ರಲ್ಲಿ ಕೃಷ್ಣವೇಣಿ (ಬಿಜೆಪಿ), ಚಂದ್ರಮೌಳಿ (ಜೆಡಿಎಸ್), ರಮೇಶ್ (ಕಾಂಗ್ರೆಸ್‌) ಮತ್ತು ಮೂವರು ಪಕ್ಷೇತರರು, ವಾರ್ಡ್ 25ರಲ್ಲಿ ಜಯರಾಮ್ (ಕಾಂಗ್ರೆಸ್), ರಮೇಶ್ (ಜೆಡಿಎಸ್) ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ವಾರ್ಡ್ 26ರಲ್ಲಿ ಭಾಗ್ಯಮ್ಮ (ಕಾಂಗ್ರೆಸ್‌), ಮಂಜುಳಾ (ಜೆಡಿಎಸ್), ವೆಂಕಟೇಶಪ್ಪ (ಬಿಜೆಪಿ), ವಾರ್ಡ್ 27ರಲ್ಲಿ ಅರುಣಾ (ಬಿಜೆಪಿ), ಕೆ.ಲಕ್ಷ್ಮಿದೇವಮ್ಮ (ಕಾಂಗ್ರೆಸ್), ಶಾಂತಮ್ಮ (ಜೆಡಿಎಸ್), ವಾರ್ಡ್ 28ರಲ್ಲಿಷೇಕ್‌ ಚಾಂದ್‌ಪಾಷಾ (ಕಾಂಗ್ರೆಸ್‌), ಸಿದ್ದಿಕ್‌ ಪಾಷಾ (ಜೆಡಿಎಸ್) ಮತ್ತು ಇಬ್ಬರು ಪಕ್ಷೇತರರು, ವಾರ್ಡ್ 29ರಲ್ಲಿ ಅಂಬರೀಶ್ (ಕಾಂಗ್ರೆಸ್), ಬಾಲಗೋವಿಂದ (ಜೆಡಿಎಸ್), ಇಬ್ಬರು ಪಕ್ಷೇತರರು, ವಾರ್ಡ್ 30ರಲ್ಲಿ ಜೈಬ್‌ ಉನ್ನೀಸಾ (ಬಿಜೆಪಿ), ನಸೀಮಾ ತಾಜ್ (ಕಾಂಗ್ರೆಸ್) ಮತ್ತು 5 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ವಾರ್ಡ್ 31ರಲ್ಲಿ ವಜೀರ್‌ ಪಾಷಾ (ಜೆಡಿಎಸ್), ಸೈಯದ್ ಅಪ್ಸರ್‌ (ಕಾಂಗ್ರೆಸ್‌) ಮತ್ತು 9 ಮಂದಿ ಪಕ್ಷೇತರರು, ವಾರ್ಡ್ 32ರಲ್ಲಿ ಶಾಹಿರಾ ಸುಲ್ತಾನಾ (ಬಿಜೆಪಿ), ನಗ್ಮ ಭಾನು (ಜೆಡಿಎಸ್), ರಶೀದ್ ಉನ್ನೀಸಾ (ಕಾಂಗ್ರೆಸ್‌), ವಾರ್ಡ್ 33ರಲ್ಲಿ ಜಕೀಯಾ ಅಂಜುಂ (ಜೆಡಿಎಸ್), ನಾಜಿಯಾ ತಾಜ್ (ಕಾಂಗ್ರೆಸ್‌), ನೂರ್ ಜಾನ್ (ಪಕ್ಷೇತರ), ವಾರ್ಡ್ 34ರಲ್ಲಿ ಮಬೀನಾ ತಾಜ್ (ಕಾಂಗ್ರೆಸ್‌), ಲಕ್ಷ್ಮಮ್ಮ (ಬಿಜೆಪಿ), ಷಮೀಮ್‌ ತಾಜ್‌ (ಪಕ್ಷೇತರ), ವಾರ್ಡ್ 35ರಲ್ಲಿ ಫರಜಾನ ಭಾನು (ಜೆಡಿಎಸ್), ಸಲ್ಮಾ ತಾಜ್ (ಕಾಂಗ್ರೆಸ್‌) ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT