ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕನ ಹತ್ಯೆ ಪ್ರಕರಣ | ಕಠಿಣ ಶಿಕ್ಷೆಗೆ ಆಗ್ರಹ; ಕೋಲಾರ ಬಂದ್ ಎಚ್ಚರಿಕೆ

Published : 9 ನವೆಂಬರ್ 2023, 10:34 IST
Last Updated : 9 ನವೆಂಬರ್ 2023, 10:34 IST
ಫಾಲೋ ಮಾಡಿ
Comments

ಕೋಲಾರ: ‘ಬಾಲಕ ಕಾರ್ತಿಕ್ ಸಿಂಗ್‌ನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಿ, ಕೋಲಾರ ಬಂದ್‌ ಮಾಡಲು ಕರೆ ನೀಡಬೇಕಾಗುತ್ತದೆ’ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ನಗರದ ಜಯನಗರ ಬಡಾವಣೆಯ ಸಫಲಮ್ಮ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಆರೋಪಿಗಳಿಗೆ ನಾಲ್ಕು ದಿನಗಳೊಳಗೆ ಶಿಕ್ಷೆಯಾಗದಿದ್ದರೆ ಕೋಲಾರ ಬಂದ್‌ಗೆ ಕರೆ ನೀಡಲು ನಿರ್ಣಯ ಕೈಗೊಂಡರು. ಸಭೆಯಲ್ಲಿ ಕಾರ್ತಿಕ್‌ ಸಿಂಗ್ ಪೋಷಕರೂ ಭಾಗಿಯಾಗಿದ್ದರು.

ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ‘ಬಡಾವಣೆಯಲ್ಲಿ ಹಿಂದೆಯೇ ಇಬ್ಬರ ಮೇಲೆ ಭೀಕರ ಹಲ್ಲೆ ನಡೆದಾಗ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದರೆ ಇಂದು ಕಾರ್ತಿಕ್ ಸಿಂಗ್ ಕೊಲೆಯಾಗುತ್ತಿರಲಿಲ್ಲ. ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಗಮನ ಮಹಿಳಾ ಸಂಘದ ಶಾಂತಮ್ಮ, ‘ಕೊಲೆಯಾಗಿರುವ ಕಾರ್ತಿಕ್ ಸಿಂಗ್ ಪ್ರತಿಯೊಬ್ಬರನ್ನೂ ಎಚ್ಚರಗೊಳಿಸಿದ್ದಾನೆ. ಯುವಕರು ಮಾದಕ ವ್ಯಸನಿಗಳಾಗುತ್ತಿದ್ದು, ಇದರ ಜಾಲ ಪೊಲೀಸರಿಗೆ ಗೊತ್ತಿರುತ್ತದೆ. ಆದರೆ, ಇದನ್ನು ಮಟ್ಟ ಹಾಕಲು ಈವರೆಗೆ ಕಠಿಣ ಕ್ರಮಕೈಗೊಳ್ಳದೆ ಇರುವುದು ವಿಷಾದಕರ ಸಂಗತಿಯಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT