ಎನ್.ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂತನಹಳ್ಳಿಯಲ್ಲಿ 2020ರ ನವೆಂಬರ್ 14ರ ರಾತ್ರಿ ತಪ್ಪಿತಸ್ಥ ಸ್ಥಾನದಲ್ಲಿರುವ ಪತಿ ಗಣೇಶ್, ತನ್ನ ಪತ್ನಿ ನಂದಿನಿ ಅವರ ಶೀಲ ಶಂಕಿಸಿ ತರಕಾರಿ ಕತ್ತರಿಸುವ ಚಾಕುವಿನಿಂದ ಕತ್ತು ಕೊಯ್ದು, ಕೊಲೆ ಮಾಡಿದ್ದರು. ಈ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.